ಜಿಲ್ಲೆ

ಪಾಲಿಕೆ ಸಭಾಭವನದ ಕಾಮಗಾರಿ ಪರಿಶೀಲನೆ

ಧಾರವಾಡ: ನಗರದ ಪಾಲಿಕೆ ಕಟ್ಟಡದಲ್ಲಿರುವ ಸಭಾಭವನದ ನವೀಕರಣ ಕಾಮಗಾರಿಯನ್ನು ಮೇಯರ್ ಈರೇಶ ಅಂಚಟಗೇರಿ ಮಂಗಳವಾರ ಪರಿಶೀಲಿಸಿದರು.
ತಿಂಗಳ ಕೊನೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆ ನಿಗದಿಪಡಿಸಲಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಸೆ. ೨೯ರೊಳಗೆ ಪೂರ್ಣಗೊಳಿಸಬೇಕು ಎಂದು ಅಽಕಾರಿಗಳಿಗೆ ಸೂಚಿಸಿದರು.
ಶಂಕರ ಶೇಳಕೆ, ಶಂಭು ಸಾಲಮನಿ, ಅನಿತಾ ಚಳಗೇರಿ, ಜ್ಯೋತಿ ಪಾಟೀಲ, ಪಾಲಿಕೆಯ ಅಽÃಕ್ಷಕ ಇಂಜಿನಿಯರ್ ತಿಮ್ಮಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಆನಂದ ಝಳಕಿ, ಎಸ್.ಎನ್. ಗಣಾಚಾರಿ, ವಲಯ ಸಹಾಯಕ ಆಯುಕ್ತ ಆರ್.ಎಂ. ಕುಲಕರ್ಣಿ ಹಾಗೂ ಗುತ್ತಿಗೆದಾರರು ಇದ್ದರು.