ಚಿಕ್ಕೋಡಿ: ಪಾಲಕರು ಕಾನ್ವೆಂಟ್‌ಮೇಲಿನ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಕೊಡಬೇಕೆಂದು ಮಜಲಟ್ಟಿಯ ಬಸವಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ಧುಳಗನವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೦೦-೦೧ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ಟಿ.ಪಿ. ಮುತ್ತಿನ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಸಮಾವೇಶಗೊಂಡು ಕಲಿಸಿದ ಶಿಕ್ಷಕರನ್ನು ನೆನಪು ಮಾಡಿಕೊಂಡು ಗೌರವಿಸುವುದು ತುಂಬ ಒಳ್ಳೆಯದು ಎಂದರು.
ಶಿಕ್ಷಕಿ ಪಿ.ಎಂ. ಮಲಪುರೆ ಮಾತನಾಡಿ, ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ವಿದ್ಯಾರ್ಥಿಗಳು ನಡೆಯಬೇಕು. ಆಗ ಸಾಧಿಸಲು ಸಾಧ್ಯ ಎಂದರು.
ವರ್ಗಾವಣೆಗೊಂಡಿರುವ ಎಸ್.ಬಿ.ನೆರ್ಲೆ, ಬಿ.ಕೆ.ಪಾಟೀಲ, ಪಿ.ಎಂ.ಮಲಪುರೆ, ಟಿ.ಪಿ. ಮುತ್ತಿನ, ಬಿ.ಎಸ್.ಪಾಟೀಲ, ವಿ.ಕೆ. ಧುಮಾಳೆ, ಎಲ್.ಬಿ. ಕಲ್ಲೆಪ್ಪನವರ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ಜೋಡಟ್ಟಿ, ರಾಜೇಂದ್ರ ಮೋಳೆ, ಭರತ ಕಲಾಚಂದ್ರ, ಸತೀಶ ಕಾಂಬಳೆ, ರಮೇಶ ಚಿಮಣೆ, ಅಮರ ಕಮತೆ, ಕಪಿಲ ಚಿಮಣೆ, ಜಯಶ್ರೀ ಪಾಟೀಲ, ತಾಯವ್ವ ಮಗದುಮ್ಮ, ತವನಪ್ಪ ಮುತ್ತಿನ ಇತರರಿದ್ದರು.