ಜಿಲ್ಲೆ

ಪಾಲಕರಿಗೆ ಕಾಡುತ್ತಿದೆ ಮಕ್ಕಳ ಚಿಂತೆ!

ಗದಗ: ಶಾಲಾ -ಕಾಲೇಜ್​ಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಂಭ್ರಮದಿಂದಲೇ ಆಗಮಿಸುತ್ತಿದ್ದಾರೆ. ಆದರೆ, ಶಿಕ್ಷಕರಲ್ಲಿ ಕರೊನಾ ಸೋಂಕು ದೃಢಪಡುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದ್ದು, ಮಕ್ಕಳನ್ನು ಶಾಲೆಗೆ ಕಳಿಸಬೇಕೇ? ಬೇಡವೇ? ಎಂಬ ಗೊಂದಲದಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 10 ಶಿಕ್ಷಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಎಲ್ಲರನ್ನೂ ಚಿಂತೆಗೀಡು ಮಾಡಿದೆ. ಶುಕ್ರವಾರ ಐದು ಮಂದಿ ಶಿಕ್ಷಕರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಅದೇ ಶಾಲೆಗಳ ಐವರು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ.

ಶುಕ್ರವಾರ ಗದಗ ನಗರದ ಸೇಂಟ್ ಜಾನ್ ಪ್ರಾಥಮಿಕ ಶಾಲೆ, ಲೋಯೋಲಾ ಪ್ರೌಢಶಾಲೆ, ಸಿ.ಎಸ್. ಪಾಟೀಲ ಶಾಲೆ, ಮಾರಲ್ ಪ್ರಾಥಮಿಕ ಶಾಲೆ ಹಾಗೂ ನರಗುಂದ ತಾಲೂಕಿನ ಜಗಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಲಾ ಒಬ್ಬ ಶಿಕ್ಷಕರಿಗೆ ಸೋಂಕು ಪತ್ತೆಯಾಗಿತ್ತು. ಶನಿವಾರ ಲೋಯೋಲಾ ಪ್ರಾಥಮಿಕ ಶಾಲೆಯಲ್ಲಿ ನಾಲ್ವರು ಮತ್ತು ಸೇಂಟ್ ಜಾನ್ ಪ್ರೌಢಶಾಲೆಯಲ್ಲಿ ಒಬ್ಬರು ಸೇರಿ ಮತ್ತೆ ಐವರು ಶಿಕ್ಷಕರಿಗೆ ಸೋಂಕು ತಗುಲಿದೆ.

ಗದಗ ಜಿಲ್ಲೆಯಲ್ಲಿ 6665 ಶಿಕ್ಷಕರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದ್ದು, ಇದರಲ್ಲಿ ಸದ್ಯ 10 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಈ ಶಿಕ್ಷಕರು ಹೋಂ ಕ್ವಾರಂಟೈನ್ ಆಗಿದ್ದಾರೆ. ಸೋಂಕು ಕಂಡು ಬಂದಿರುವ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಐದು ಶಾಲೆಗಳನ್ನು ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆಯ ಸಲಹೆ ಪಡೆದು ಶಾಲೆ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.|ಬಸವಲಿಂಗಪ್ಪ ಜಿ.ಎಂ., ಡಿಡಿಪಿಐ ಗದಗ
ಶಾಲಾ ಆರಂಭೋತ್ಸವದಿಂದಲೇ ಶಿಕ್ಷಕರಿಗೆ ಸೋಂಕು ದೃಢಪಟ್ಟದೆ ಎಂದು ಬಿಂಬಿಸುವುದು ಸರಿಯಲ್ಲ. ಪಾಲಕರು ಭಯಪಡುವ ಅವಶ್ಯಕತೆ ಇಲ್ಲ. ಶಾಲೆ-ಕಾಲೇಜ್ ಆರಂಭಿಸುವ ಮುನ್ನ, ಎಲ್ಲ ಸಾಧಕ-ಬಾಧಕಗಳನ್ನು ರ್ಚಚಿಸಿಯೇ ಸರ್ಕಾರ ಕ್ರಮ ಕೈಗೊಂಡಿದೆ. ಸೋಂಕು ಹೆಚ್ಚು ಕಂಡು ಬಂದರೆ ಸರ್ಕಾರ ತನ್ನ ನಿರ್ಣಯ ಪುನರ್​ಪರಿಶೀಲಿಸುವ ಅವಕಾಶವಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದು.|ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ
ಶಿಕ್ಷಕರಲ್ಲಿ ಸೋಂಕು ಕಂಡು ಬರುತ್ತಿರುವುದರಿಂದ ಶಾಲಾ-ಕಾಲೇಜ್​ಗಳಿಗೆ ಮಕ್ಕಳನ್ನು ಕಳಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದು, ಮಕ್ಕಳು ಮನೆಯಲ್ಲಿಯೇ ಕುಳಿತರೆ ಪ್ರಯೋಜನ ಇಲ್ಲ. ಆದರೆ, ಕರೊನಾ ಸೋಂಕಿನ ಭೀಕರತೆ ನೆನಪಿಸಿಕೊಂಡರೆ ಮಕ್ಕಳನ್ನು ಶಾಲೆಗೆ ಕಳಿಸಲೇಬಾರದು ಎಂದೆನಿಸುತ್ತದೆ. ಏನು ಮಾಡಬೇಕು ಎಂಬುದು ತೋಚುತ್ತಿಲ್ಲ. ಸರ್ಕಾರ ಶಿಕ್ಷಕರು ಮತ್ತು ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕು. | ಶಂಕ್ರಪ್ಪ ಕೊಪ್ಪಳ, ಪಾಲಕರು, ಗದಗ

========================

2ಜಿಡಿಜಿ13:

ಗ್ರಾಪಂ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ, ಮೀಸಲಾತಿ, ವರ್ಗೀಕರಣ ಆದೇಶ

ಜಿಲ್ಲೆಯ 122 ಗ್ರಾಪಂಗಳಲ್ಲಿ 63 ಸ್ಥಾನ ಮಹಿಳೆಯರಿಗೆ

ಗದಗ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದ ಮೂರೇ ದಿನಗಳಲ್ಲಿ ಚುನಾವಣೆ ಆಯೋಗ ತಾಲೂಕುವಾರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ವರ್ಗೀಕರಿಸಿ ಆದೇಶ ಹೊರಡಿಸಿದೆ. ಜಿಲ್ಲೆಯ 122 ಗ್ರಾಪಂಗಳಲ್ಲಿ ಒಟ್ಟು 63 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ವಾರದೊಳಗೆ ಜಿಲ್ಲಾಧಿಕಾರಿ ಗ್ರಾ.ಪಂ.ವಾರು ಮೀಸಲಾತಿ ನಿಗದಿಪಡಿಸುವ ಸಾಧ್ಯತೆ ಇದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಅಧಿಕಾರಕ್ಕಾಗಿ ಮತ್ತೊಂದು ಸುತ್ತಿನ ಕಸರತ್ತು ಶುರುವಾಗಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವರ್ಗೀಕರಣ ಒಂದೇ ರೀತಿಯಾಗಿರುವುದರಿಂದ ಗ್ರಾಪಂವಾರು ಮೊದಲು ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಗೊಳಿಸಿ ನಂತರ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಗೊಳಿಸಬೇಕು. ಅಲ್ಲದೆ, ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ಮೀಸಲಾತಿ ಬರದಂತೆ ನೋಡಿಕೊಳ್ಳಬೇಕು ಎಂದು ಚುನಾವಣೆ ಆಯೋಗ ಸೂಚಿಸಿದೆ.

ಮೀಸಲಾತಿ ವರ್ಗೀಕರಣದಲ್ಲಿ ಜಿಲ್ಲೆಯ 122 ಗ್ರಾಪಂಗಳಲ್ಲಿ 63 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 21 ಗ್ರಾಪಂಗಳು ಎಸ್​ಸಿಗೆ ಮೀಸಲಾಗಿದ್ದರೆ, ಅದರಲ್ಲಿ 13 ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಎಸ್​ಟಿ ವರ್ಗಕ್ಕೆ 9 ಸ್ಥಾನಗಳಿದ್ದು, ಅದರಲ್ಲಿ ಮಹಿಳೆಯರಿಗೆ 7 ಸ್ಥಾನಗಳು ಮೀಸಲಾಗಿವೆ. ಅ ವರ್ಗಕ್ಕೆ 22 ಸ್ಥಾನಗಳಿದ್ದು, ಮಹಿಳೆಯರಿಗೆ 14 ಸ್ಥಾನಗಳು ಮೀಸಲಾಗಿವೆ. ಬ ವರ್ಗಕ್ಕೆ 7 ಸ್ಥಾನಗಳಿದ್ದು, 2 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ 63 ಸ್ಥಾನಗಳಿದ್ದು, ಅದರಲ್ಲಿ 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ತಾಲೂಕುವಾರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವರ್ಗೀಕರಣ ವಿವರ

(ಆವರಣದಲ್ಲಿರುವ ಸಂಖ್ಯೆ ಮಹಿಳಾ ಮೀಸಲಾತಿ)

ತಾಲೂಕು ಒಟ್ಟು ಗ್ರಾಪಂ ಎಸ್​ಸಿ ಎಸ್ಟಿ, ಅ ವರ್ಗ ಬ ವರ್ಗ ಸಾಮಾನ್ಯ

ಗದಗ 27(14) 5(3) 2(1) 5(2) 1(1) 14 (7)

ಶಿರಹಟ್ಟಿ 14(7) 3(2) 1(1) 2(2) 1(0) 7(2)

ಲಕ್ಷೆ್ಮೕಶ್ವರ 14(7) 3(2) 1(1) 2(2) 1(0) 7(2)

ಮುಂಡರಗಿ 19(10) 4(2) 2(1) 2(2) 1(0) 10 (5)

ರೋಣ 24(12) 3(2) 1(1) 6(3) 2(1) 12(5)

ಗಜೇಂದ್ರಗಡ 11(6) 2(1) 1(1) 2(1) 0(0) 6(3)

ನರಗುಂದ 13(7) 1(1) 1(1) 3(2) 1(0) 7(3)

EndFragment