ಕೊಳ್ಳೇಗಾಲ ಪಟ್ಟಣದ ಕಾರ್ನರ್ ಸ್ಟೋನ್ ಕಾಲೇಜಿನಲ್ಲಿ ಸೋಮವಾರ ಕರೊನಾದಿಂದ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಸಹಾಯಧನ ನೀಡಿತು.  
ಜಿಲ್ಲೆ

ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ನೆರವು

ಕೊಳ್ಳೇಗಾಲ: ಪಟ್ಟಣದ ಕಾರ್ನರ್ ಸ್ಟೋನ್ ಕಾಲೇಜಿನಲ್ಲಿ ಸೋಮವಾರ ಬೆಂಗಳೂರಿನ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಕರೊನಾ ಸಾಂಕ್ರಾಮಿಕ ಪಿಡುಗಿನಿಂದ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು. ಹನೂರು ಹಾಗೂ ಕೊಳ್ಳೇಗಾಲ ಭಾಗದ 50 ವಿದ್ಯಾರ್ಥಿಗಳಿಗೆ ತಲಾ 6 ಸಾವಿರ ರೂ. ಚೆಕ್ ವಿತರಣೆ ಮಾಡಲಾಯಿತು. ಟ್ರಸ್ಟ್ ಮಾರ್ಗದರ್ಶಕ ರವಿಶಂಕರ್ ಮಾತನಾಡಿ, ಅನೇಕ ಸಮಾಜಮುಖಿ ಕಾರ್ಯಕ್ರಗಳನ್ನು ನಮ್ಮ ಟ್ರಸ್ಟ್ ಮಾಡುತ್ತ ಬಂದಿದೆ. 2 ವರ್ಷಗಳ ಹಿಂದೆ ಕರೊನಾ ಮಹಾಮಾರಿಯಿಂದ ತಂದೆ, ತಾಯಿ, ಇವರಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುತ್ತಿದ್ದೇವೆ ಎಂದರು. ಕಾರ್ನರ್ ಸ್ಟೋನ್‌ನ ರುಬಿನ್ ಮೊಸೆಸ್, ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮನೋಜ್‌ಕುಮಾರ್, ಉಮಾ ಮತ್ತಿತರರಿದ್ದರು.