ಜಿಲ್ಲೆ

ಪಾಲಕರ ವಿರುದ್ಧ ಪೊಲೀರಿಗೆ ದೂರು ನೀಡಿದ ಬಾಲಕಿ!

ಗುಂಡ್ಲುಪೇಟೆ: ಶಾಲೆಯಲ್ಲಿ ಚೆನ್ನಾಗಿ ಓದುವಂತೆ ಹೇಳಿದ್ದರಿಂದ ಬೇಸರಗೊಂಡ ಪುತ್ರಿ ಪಾಲಕರ ವಿರುದ್ಧ ಪೊಲೀಸ್ ಠಾಣೆಯ ಮೊರೆಹೋದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಅಪ್ರಾಪ್ತ (9 ನೇ ತರಗತಿ) ವಿದ್ಯಾರ್ಥಿನಿ ಪೊಲೀಸರ ಮೊರೆಹೋಗಿದ್ದಳು. ಪಟ್ಟಣದ ಹೊಸೂರು ಬಡಾವಣೆಯ ನಿವಾಸಿ ಇಬ್ರಾಹಿಂ ಹಾಗೂ ಪತ್ನಿ ತಮ್ಮ ಪುತ್ರಿಗೆ ಚೆನ್ನಾಗಿ ಓದುವಂತೆ ಒತ್ತಡ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಬಾಲಕಿ ತನ್ನ ಪಾಲಕರ ವಿರುದ್ಧ ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಹೋಗಿದ್ದಳು. ಕೂಡಲೇ ಪಾಲಕರನ್ನು ಠಾಣೆಗೆ ಕರೆಸಿದ ಪೊಲೀಸರು, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ ಅವರ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಮಕ್ಕಳ ಮೇಲೆ ಒತ್ತಡ ಹೇರದಂತೆ ತಿಳಿವಳಿಕೆ ನೀಡಿದರು. ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಾಲಕಿಯನ್ನು ಪಾಲಕರೊಂದಿಗೆ ಮನೆಗೆ ಕಳಿಸಿದ್ದಾರೆ.