ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ನಡೆಯುತ್ತಿರುವ ಅಮೂಲ್ಯ ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಪರಿತ್ಯೆಕ್ತ ಹೆಣ್ಣು ಮಗುವನ್ನು ನೀಡಲಾಗಿದೆ.
ಈ ಮಗು ಬಾದಾಮಿ ತಾಲೂಕಿನ ಯರಗೊಪ್ಪ ಎಸ್.ಬಿ.ಗ್ರಾಮದಲ್ಲಿ ಸೆಪ್ಟೆಂಬರ ೧೪ ರಂದು ದೊರೆತಿದ್ದು, ಮಗು ೨ ದಿನದ್ದಾಗಿದೆ. ಗೋದಿ ಬಣ್ಣ, ೧.೬ ಕೆಜಿ ತೂಕಹೊಂದಿರುತ್ತದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿಗೆ ಸಂಬಂಽಸಿದವರು ೬೦ ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಽಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ಸೆಕ್ಟರ ನಂ.೪, ನವನಗರ, ಬಾಗಲಕೋಟೆ ದೂಸಂ.೦೮೩೫೪-೨೯೫೩೪೫ ಇವರನ್ನು ಭೇಟಿ ನೀಡಬೇಕು. ಇಲ್ಲದಿದ್ದಲ್ಲಿ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಽಕಾರಿ ವೀಣಾ ಎಂ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.