ಜಿಲ್ಲೆ

ಪಾರ್ಥೇನಿಯಂ ನಿರ್ವಹಣೆ ಅಗತ್ಯ

ನೇಸರಗಿ: ಪಾರ್ಥೇನಿಯಂ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ವಿಷಕಾರಿ, ಹಾನಿಕಾರಕ ಕಳೆಯಾಗಿದೆ ಎಂದು ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಬಿ. ವಿಶ್ವನಾಥ ಹೇಳಿದರು.

ಸ್ಥಳಿಯ ಚನ್ನವೃಷಬೇಂದ್ರ ದೇವರಕೊಂಡಜ್ಜನ ಸಭಾಭವನದಲ್ಲಿ ಎಡಿಎಂ ಅಗ್ರೋ ಇಂಡಸ್ಟ್ರೀಸ್​ ಇಂಡಿಯಾ ಪೆ ಲಿ. ಬಾಯರ್​ ಕ್ರಾಪ್​ ಸೆನ್ಸ್​ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೆತರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾರ್ಥೇನಿಯಂ ಮನುಷ್ಯರು ಹಾಗೂ ಜಾನುವಾರುಗಳಿಗೆ ಅಪಾಯವನ್ನುಂಟು ಮಾಡುವ ಕಳೆಯಾಗಿದ್ದು, ಸೂಕ್ಷ$್ಮವಾಗಿ ನಿರ್ವಹಿಸಬೇಕು ಎಂದರು

ನೇಸರಗಿ ರೆತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರ್​.ಐ. ಕುಂಬಾರ ಮಾತನಾಡಿ, ನೇಸರಗಿ ಹೋಬಳಿಯಲ್ಲಿ ಅತಿ ಹೆಚ್ಚು ಸೋಯಾಬೀನ್​ ಬೆಳೆಯುತ್ತಿದ್ದು, ಪ್ರಸಕ್ತ ವರ್ಷ ಹೆಚ್ಚು ಮಳೆಯಾಗುತ್ತಿರುವುದರಿಂದ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದ್ದು, ರೆತರು ಸೂಕ್ತ ನಿರ್ವಹಣಾ ಕ್ರಮ ಕೆಗೊಳ್ಳಬೇಕೆಂದರು. ಬಸವರಾಜ ತುರಾಯಿ, ಪ್ರಗತಿಪರ ರೆತ ಮಲ್ಲೇಶಪ್ಪ ಮಾಳಣ್ಣವರ, ರವಿ ಅಂಬರಶೆಟ್ಟಿ, ಬಸವರಾಜ ಮಡಿವಾಳರ, ನೇಸರಗಿ, ಸೋಮನಟ್ಟಿ, ಮದನಬಾವಿ,ಮುರ್ಕಿಭಾವಿ ಗ್ರಾಮದ ರೆತರು ಉಪಸ್ಥಿತರಿದ್ದರು.