ಜಿಲ್ಲೆ

ಪಾರಿವಾಳ ವಿಷಯಕ್ಕೆ ಬಾಲಕ ಆತ್ಮಹತ್ಯೆ?

ತುಮಕೂರು: ಪಾರಿವಾಳ ಹಿಡಿಯುವ ವಿಷಯದಲ್ಲಿ ಸ್ನೇಹಿತರೊಂದಿಗೆ ಗಲಾಟೆಯಾಗಿದ್ದೇ ನೆಪಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯನಗರದಲ್ಲಿ ಶುಕ್ರವಾರ ಬೆಳಗ್ಗೆ ಟನೆ ನಡೆದಿದ್ದು, ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕಿ ಶಂಕುತಲಾ ನಟರಾಜ್​ ಅವರ ಒಬ್ಬನೇ ಮಗ ತ್ರಿಶಾಲ್​(13) ಮೃತ. ನಗರದ ಸವೋರ್ದಯ ಪ್ರೌಢಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ತ್ರಿಶಾಲ್​ ತಾಯಿ ಶಂಕುತಲಾ ಜತೆ ವಿಜಯನಗರದ 2ನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಶುಕ್ರವಾರ ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್​ನೋಟ್​ ಕೂಡ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಪಾರಿವಾಳದ ಬೆಟ್ಟಿಂಗ್​ ಹಣಕಾಸು ವಿಚಾರಕ್ಕೆ ಸ್ನೇಹಿತರ ಜತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.