ಜಿಲ್ಲೆ

ಪಾರದರ್ಶಕತೆಯಿಂದ ಬ್ಯಾಂಕ್ ಅಭಿವೃದ್ಧಿ

ಹುಬ್ಬಳ್ಳಿ: ಬ್ಯಾಂಕ್ ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಇದ್ದರೆ ಗ್ರಾಹಕರು ತಾವಾಗಿಯೇ ಹುಡುಕಿಕೊಂಡು ಬರುತ್ತಾರೆ. ಬಸವಶ್ರೀ ಕೋ-ಆಪ್ ಸೊಸೈಟಿಯನ್ನು ಸಹ ಇನ್ನಷ್ಟು ಜನಪ್ರಿಯಗೊಳಿಸಿ ಬೆಳೆಸಲು ಎಲ್ಲರೂ ಗಮನ ಹರಿಸಬೇಕು ಎಂದು ಮಣಕವಾಡ ದೇವಮಂದಿರದ ಶ್ರೀ ಅಭಿನವ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ನಗರದ ಬಸವಶ್ರೀ ಅರ್ಬನ್ ಕೋ ಆಪ್ ಸೊಸೈಟಿಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೆಚ್ಚ ಕಡಿಮೆ ಮಾಡಲು ಗಮನ ಹರಿಸುವ ಅಗತ್ಯ ಕಂಡುಬರುತ್ತಿದೆ. ಹೆಚ್ಚು ಕಾಲ ದುಡಿಮೆಯತ್ತ ಗಮನ ನೀಡಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಶ್ರಮಿಸಬೇಕು ಎಂದರು. ಸೊಸೈಟಿಯು ಇನ್ನಷ್ಟು ಬೆಳವಣಿಗೆಯಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಎಸ್.ವಿ. ಅಂಗಡಿ ಮಾತನಾಡಿ, ಪ್ರಥಮ ವರ್ಷದಲ್ಲಿಯೇ ಸೊಸೈಟಿ ಲಾಭದಲ್ಲಿ ಮುನ್ನಡೆೆದಿದೆ ಎಂದರು.

ಗ್ರಾಹಕರಾದ ಬಸವರಾಜ ಕರಡಿಕೊಪ್ಪ, ಡಾ. ಮಹದೇವ ಪಟ್ಟಣಶೆಟ್ಟಿ, ಶಶಿಧರ ಕಡ್ಲೂರ, ಸಿದ್ದಲಿಂಗೇಶ ಸತ್ಯಪ್ಪನಮಠ ಅವರನ್ನು ಸತ್ಕರಿಸಲಾಯಿತು. ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿ ವಿಜಯಕುಮಾರ ಶೆಟ್ಟರ್, ಎಸಿಬಿ ಡಿವೈಎಸ್​ಪಿ ವಿಜಯ ಕುಮಾರ ಬಿಸನಳ್ಳಿ, ಡಾ. ಅಶೋಕ ಬಂಗಾರ ಶೆಟ್ಟರ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಈರಣ್ಣ ಮಳಗಿ, ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ನಿರ್ದೇಶಕ ಸೋಮಶೇಖರ ಉಮರಾಣಿ, ಸೊಸೈಟಿ ಉಪಾಧ್ಯಕ್ಷೆ ಲತಾರಾಣಿ ಉಮರಾಣಿ, ನಿರ್ದೇಶಕರಾದ ವಿರೂಪಾಕ್ಷ ಬಿಸರಳ್ಳಿ, ಶಿವಾನಂದ ಉದಪುಡಿ, ಮಹಾಂತೇಶ ಕುಮಟಗಿ, ಆನಂದ ಉಪ್ಪಿನ ಇತರರು ಉಪಸ್ಥಿತರಿದ್ದರು. ಎಸ್.ವಿ. ಅಂಗಡಿ ಸ್ವಾಗತಿಸಿದರು. ಡಾ. ವೀರೇಶ ಹಂಡಿಗಿ ನಿರೂಪಿಸಿದರು. ವ್ಯವಸ್ಥಾಪಕ ಚಂದ್ರಶೇಖರ ಕಮಡೊಳ್ಳಿ ವಂದಿಸಿದರು.