ಹುಕ್ಕೇರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಚಂದ್ರಶೇಖರ ಶಿವಾಚಾರ್ಯರು, ಮಂಜುಳಾ ನಾಯಿಕ, ಮಹಾಂತೇಶ ಬಸಾಪೂರ, ಪ್ರಭಾವತಿ ಪಾಟೀಲ, ಮಹಾಂತೇಶ ಬಸ್ಸಾಪೂರೆ, ಬಿ.ಎ.ಮೇಕಲಮರಡಿ ಇತರರಿದ್ದರು. 
ಜಿಲ್ಲೆ

ಪಾರದರ್ಶಕ ಆಡಳಿತ ನೀಡಲು ಸಂಕಲ್ಪ

ಹುಕ್ಕೇರಿ: ತಾಲೂಕಾಡಳಿತದ ಎಲ್ಲ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ತ್ವರಿತ ಮತ್ತು ಪಾರದರ್ಶಕ ಆಡಳಿತ ನೀಡುವ ಸಂಕಲ್ಪ ಹೊಂದಿರುವುದಾಗಿ ನೂತನ ತಹಸೀಲ್ದಾರ್ ಮಂಜುಳಾ ನಾಯಿಕ ಹೇಳಿದರು.

ಪಟ್ಟಣದ ಅಕ್ಷರ ದಾಸೋಹ ಕೇಂದ್ರ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಹಾಗೂ ಆಕಾರಿ ವರ್ಗ ಸಹಕಾರ ನೀಡಬೇಕು ಎಂದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಇಒ ಪ್ರಭಾವತಿ ಪಾಟೀಲ, ಸಿಪಿಐ ಮಹಾಂತೇಶ ಬಸ್ಸಾಪೂರೆ ಮಾತನಾಡಿದರು. ಕ್ಷೇತ್ರ ಶಿಕ್ಷಣಾಕಾರಿಗಳಾದ ಬಿ.ಎ.ಮೇಕಲಮರಡಿ, ಎಂ.ಬಿ.ನಾಯಿಕ, ಪುರಸಭೆ ಮುಖ್ಯಾಕಾರಿ ಕಿಶೋರ ಬೆಣ್ಣಿ, ಅಕ್ಷರ ದಾಸೋಹ ಯೋಜನಾಕಾರಿ ಸವಿತಾ ಹಲಕಿ, ಎಂ.ಬಿ. ಜಿನಗೌಡರ ಇತರರಿದ್ದರು.