ಜಿಲ್ಲೆ

ಪಾರಂಪರಿಕ ವೈದ್ಯ ಸಮಾವೇಶ

ಕಲಬುರಗಿ: ಸೇಡಂನ ಬೀರನಹಳ್ಳಿ ಕ್ರಾಸ್ ಪ್ರಕೃತಿ ನಗರದಲ್ಲಿ ನಡೆಯಲಿರುವ ಭಾರತಿ ಸಂಸ್ಕೃತಿ ಉತ್ಸವದಲ್ಲಿ ಫೆ.೪ ಮತ್ತು ೫ರಂದು ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ವೈದ್ಯ ಆನಂದ ಹೇರೂರ ಹೇಳಿದರು.

ಶ್ರೀ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಪೋಷಕ ಬಸವರಾಜ ಪಾಟೀಲ್ ಸೇಡಂ ಉಪಸ್ಥಿತಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಪ್ರಕಾಶ ಟಿಡಿಯು, ನಾಗರಾಜ ಗಸ್ತಿ ಲಿಂಗಸಗೂರು ಸೇರಿ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ, ರಾಷ್ಟçಮಟ್ಟದ ನಾಟಿ ವೈದ್ಯರು ಸಮಾವೇಶದಲ್ಲಿ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದು, ರಾಜ್ಯದ ಪಾರಂಪರಿಕ ವೈದ್ಯರು ಪಾಲ್ಗೊಂಡು ಸಮಾವೇಶದ ಲಾಭ ಪಡೆಯಬೇಕು. ಭಾಗವಹಿಸುವವರಿಗೆ ೨೫೦ ರೂ. ನೋಂದಣಿ ಇದ್ದು, ಎರಡು ದಿನ ಊಟ, ವಸತಿ ಒದಗಿಸಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.

ಪಾರAಪರಿಕ, ನಾಟಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮಾಹಿತಿ, ನೋಂದಣಿಗೆ ೮೭೨೨೦೨೯೦೦೨, ೯೬೧೧೯೩೫೦೦೯, ೯೯೦೧೦೬೮೭೭೪, ೯೫೯೦೩೧೯೨೫೪ ಗೆ ಸಂಪರ್ಕಿಸಬೇಕು ಎಂದು ಹೇಳಿದರು. ಪ್ರಮುಖರಾದ ಆರ್.ಸಿ.ನಾಯಕ, ಬಾಬುರಾವ ಗುಳೇದ ಇತರರಿದ್ದರು.