ಚಿತ್ರದುರ್ಗ: ಅನುಭವ ಆಧರಿಸಿ ಚಿಕಿತ್ಸೆ ನೀಡುವಂಥ ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಉಪ ಅರಣ್ಯ ಸಂಕರಕ್ಷಣಾಧಿಕಾರಿ ಟಿ.ರಾಜಣ್ಣ ಹೇಳಿದರು.
ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಚಿತ್ರದುರ್ಗ ತಾಲೂಕು ಘಟಕದಿಂದ ನಗರದ ಪಿ ಆ್ಯಂಡ್ ಟಿ ಕ್ವಾರ್ಟಸ್ ಗಣಪತಿ ದೇವಸ್ಥಾ ನದಲ್ಲಿ ಮಂಗಳವಾರ ಏರ್ಪಡಿಸಿದ್ದ ಧನ್ವಂತರಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಇತರ ವೈದ್ಯಕೀಯ ಪದ್ಧತಿಗಳಿಂದ ಗುಣಪಡಿಸಲಾಗದ ಕಾಯಿಲೆಗಳನ್ನು ಪಾರಂಪರಿಕ ವೈದ್ಯ ಪದ್ಧತಿ ಮೂಲಕ ವಾಸಿ ಮಾಡ ಬ ಹುದಾಗಿದೆ ಎಂದು ಹೇಳಿದರು.
ಅಪರೂಪದ ಸಸ್ಯ ಪ್ರಬೇಧಗಳಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿರುತ್ತವೆ. ಪ್ರತಿ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿರುವ ಜೀವ ವೈವಿದ್ಯ ಮಂಡಳಿಯಲ್ಲಿ ಸಸ್ಯ,ಪ್ರಾಣಿ ಪ್ರಬೇಧಗಳನ್ನು ದಾಖಲೆಯಾಗಿ ಇಟ್ಟುಕೊಳ್ಳಬಹುದು. ಜೋಗಿಮಟ್ಟಿಯಲ್ಲಿ ನೂರಾರು ಬಗೆಯ ಔಷಧೀಯ ಸಸ್ಯಗಳಿವೆ. ಅಂತಹ ಅಪರೂಪದ ಸಸ್ಯಗಳನ್ನು ಸಂರಕ್ಷಿಸಿ ಜೋಪಾನ ಮಾಡಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಔಷಧೀಯ ಸಸ್ಯಗಳನ್ನು ಗುರುತಿಸಿ ಉಪಯೋಗಿಸಿಕೊಳ್ಳುವ ವಿಧಾನ ಅರಿಯಬೇಕಿದೆ. ಪಾರಂಪರಿಕ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ನಂಬಿಕೆ ಇರ ಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಗಿಡ, ಮರ, ಬಳ್ಳಿ, ಹೂವು, ಕಾಂಡ, ಬೇ ರು ಇವುಗಳಲ್ಲಿ ನಾನಾ ರೀತಿಯ ಔಷಧೀಯ ಗುಣಗಳಿರುತ್ತದೆ. ಪರಿಸರ ನಾಶಕ್ಕೆ ಪರ್ಯಾಯವಾಗಿ ಗಿಡಮೂಲಿಕೆಗಳನ್ನು ಹೆಚ್ಚು ಬೆಳೆಸ ಬೇಕು. ರಾಜ-ಮಹಾರಾಜರ ಕಾಲದಿಂದ ರೂಢಿಯಲ್ಲಿರುವ ಧನ್ವಂತರಿ ಚಿಕಿತ್ಸಾ ಪದ್ಧತಿಯನ್ನು ಉಳಿಸಿಕೊಳ್ಳ ಬೇಕಿದೆ ಎಂದರು. ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎನ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಧನ್ವಂತರಿ ಸ್ವದೇಶಿ ಪಾರಂಪರಿಕ ವೈದ್ಯಪರಿಷತ್ ತಾಲೂಕು ಅಧ್ಯಕ್ಷ ಎಸ್.ಬಿ.ಲೋಕೇಶ್ ಇದ್ದರು. ಅನಸೂಯ ಪ್ರಾರ್ಥಿಸಿದರು. ಪಾರಂಪರಿಕ ವೈದ್ಯ ವೀರಣ್ಣ ಸ್ವಾಗತಿಸಿದರು. ಪಾರಂಪರಿಕ ವೈದ್ಯರಾದ ಕೆ.ದಿನೇಶ್, ಕನಕ ಶೇಖರರಾಜು ಅವರನ್ನು ಸನ್ಮಾನಿಸಲಾಯಿತು.