ಮೈಸೂರು: ಮೈಸೂರಿನ ಪರಂಪರೆ, ಸಂಸ್ಕೃತಿಯ ವೈಭವವನ್ನು ತಿಳಿಸುವ ಪಾರಂಪರಿಕ ಕಟ್ಟಡಗಳನ್ನು ಉಳಿಸುವ ಜತೆಗೆ ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಲು ಯುವಜನತೆ ಧ್ವನಿ ಎತ್ತಬೇಕು ಎಂದು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಇನ್ಛೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದಿಂದ ನಗರ ಕಲಾಮಂದಿರದಲ್ಲಿ ಆಯೋಜಿಸಿರುವ ಏಳು ದಿನಗಳ ಸಾಂಸ್ಕ ೃತಿಕ ಉತ್ಸವ ‘ಭಾರತೀಯಂ ಹಬ್ಬಗಳು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಪರಂಪರೆಯನ್ನು ಬಿಂಬಿಸುವ ಕಟ್ಟಡಗಳಿವೆ. ಕೆಲವು ಶಿಥಿಲಗೊಂಡಿದ್ದು, ಅವುಗಳನ್ನು ಜೀಣೋದ್ದಾರ ಮಾಡಿ ಉಳಿಸಿಕೊಳ್ಳಬೇಕಿದೆ. ಇನ್ಪೋಸಿಸ್ ಫೌಂಡೇಷನ್‌ನಿಂದ ಮೈಸೂರು, ಮೇಲುಕೋಟೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಇರುವ ಕೆಲ ಪಾರಂಪರಿಕ ಕಟ್ಟಡಗಳ ಜೀರ್ಣೋದ್ಧಾರ ಮಾಡಲಾಗಿದೆ. ಅದೇ ರೀತಿ ಬೇರೆ ಬೇರೆ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಟ್ಟಡಗಳ ಸಂರಕ್ಷಣೆಗಾಗಿ ಎಲ್ಲರೂ ಧ್ವನಿ ಎತ್ತಬೇಕು. ಅದಕ್ಕಾಗಿ ಯುವ ಜನತೆಯು ನಮ್ಮೊಂದಿಗೆ ಕೈ ಜೋಡಿಸಬೇಕು. ಭಾರತೀಯ ಪರಂಪರೆಯನ್ನು ಬಿಂಬಿಸುವಂತಹ ಹಬ್ಬಗಳು ನಿರಂತರವಾಗಿ ನಡೆಯಬೇಕು. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇನ್ಛೋಸಿಸ್ ಮೈಸೂರು ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ಶಾಜಿ ವ್ಯಾಥ್ಯೂ ಮಾತನಾಡಿ, ಯಾವುದೇ ದೇಶದಲ್ಲಿ ಸಾಂಸ್ಕೃತಿ ಪರಂಪರೆ ಇರುತ್ತದೆೋಂ ಅಂತಹ ರಾಷ್ಟ್ರ ಸಮೃದ್ಧ ಮತ್ತು ಒಗ್ಗಟ್ಟಿನಿಂದ ಕೂಡಿರುತ್ತದೆ. ಅಂತಹ ಸಂವೃದ್ಧಿಯ ಪರಂಪರೆ, ಸಂಸ್ಕೃತಿಯನ್ನು ನಮ್ಮ ಭಾರತದಲ್ಲಿ ಕಾಣಬಹುದು. ಅದು ಇಲ್ಲಿಯ ಪ್ರತಿಯೊಬ್ಬರ ಜೀವನದ ಒಂದು ಭಾಗವೇ ಅಗಿದೆ ಎಂದು ಬಣ್ಣಿಸಿದರು.
ನಮ್ಮ ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ಕಲೆಗಳು ಇದ್ದು, ಅವುಗಳ ವೈವಿಧ್ಯವನ್ನು ಅರಿಯಬೇಕಿದೆ. ಕಲೆ, ಪರಂಪರೆ, ಸಂಸ್ಕೃತಿ ಪ್ರೋತ್ಸಾಹಿಸಲು ಇನ್ಛೋಸಿಸ್ ಮತ್ತು ಭಾರತೀಯ ವಿದ್ಯಾಭವನದೊಂದಿಗೆ ಸುಮಾರು ಒಂದೂವರೆ ಸಾವಿರ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್ ಮಾತನಾಡಿ, ಕೇವಲ ಅದ್ದೂರಿ ತಮಕ್ಕೆ ಕಾರ್ಯಕ್ರಮಗಳು ಸೀಮಿತವಾಗಬಾರದು. ಅದಕ್ಕಾಗಿ ಭಾರತೀಯ ಹಬ್ಬವು ಅದ್ದೂರಿ ತನಕ್ಕೆ ಸೀಮಿತವಾಗದೆ ಕಲೆ, ಸಂಸ್ಕೃತಿ ಪ್ರದರ್ಶಿಸಲು ವೇದಿಕೆ ನಿರ್ಮಿಸಿಕೊಡುವ ಕೆಲಸ ವಾಡಿಕೊಂಡು ಬಂದಿದೆ ಎಂದರು.
ಮೈಸೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಬಿ.ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪಿ.ಎಸ್.ಗಣಪತಿ ಇದ್ದರು. ಬಳಿಕ ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಸೂತ್ರದ ಗೊಂಬೆ ಆಟ ಪ್ರದರ್ಶನ, ಭಾಸ್ಕರ್ ಕೊ