ಜಿಲ್ಲೆ

ಪಾದಯಾತ್ರಿಗಳಿಗೆ ಹಣ್ಣು, ಬಿಸ್ಕತ್ ವಿತರಣೆ

ಬೀದರ್: ಭವಾನಿ ಮಾತೆ ದರ್ಶನಕ್ಕೆ ಪಾದಯಾತ್ರೆಯಲ್ಲಿ ತುಳಜಾಪುರಕ್ಕೆ ಹೊರಟ ಭಕ್ತರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ್ಣು, ಬಿಸ್ಕತ್ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿದರು.

ವಿಜಯದಶಮಿ ಅಂಗವಾಗಿ ಕರ್ನಾಟಕದ ಸಾವಿರಾರು ಜನ ಪಾದಯಾತ್ರೆಯಲ್ಲಿ ದೇವಿಯ ದರ್ಶನ ಪಡೆಯಲು ಮಹಾರಾಷ್ಟ್ರದ ತುಳಜಾಪುರಕ್ಕೆ ತೆರಳುತ್ತಾರೆ. ಬಳಲಿಕೆ ಹಾಗೂ ಬಾಯಾರಿಕೆ ತಪ್ಪಿಸಲು ಭಕ್ತರಿಗೆ ನೀರು, ಬಾಳೆಹಣ್ಣು, ಬಿಸ್ಕತ್ ವಿತರಿಸಲಾಗಿದೆ ಎಂದು ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ ಹೇಳಿದರು.

4,000 ಬಾಳೆಹಣ್ಣು, 1,500 ಬಿಸ್ಕತ್ ಪೊಟ್ಟಣ ಹಾಗೂ 1,200 ನೀರಿನ ಬಾಟಲಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಮಹಾಸಭಾ ಪದಾಧಿಕಾರಿಗಳಾದ ಸೋಮನಾಥ ಹುಣಜೆ, ದತ್ತಾತ್ರಿ ನಾವದಗೆ, ಸಂಗಮೇಶ ಮಸ್ಕಲೆ, ಶಿವಕುಮಾರ ರಾಜಗಿರೆ, ಮಾಣಿಕ ಗುಡೂರ್, ಸಚಿನ್ ಚಿಮಕೋಡೆ, ಆದಿತ್ಯ ಹೂಗಾರ, ಸತೀಶ್ ಕುಂಬಾರ, ವೀರೇಶ್ ಮೊದಲಾದವರು ಇದ್ದರು.