ಕೊಳ್ಳೇಗಾಲ: ಶಿವರಾತ್ರಿ ಹಿನ್ನೆಲೆಯಲ್ಲಿ ಮಹದೇಶ್ವರಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಪೊಲೀಸ್ ಇಲಾಖೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಧುವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಕೆಲವು ನಿಯಮಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಅಳವಡಿಸಿದೆ.
ಶ್ರೀಮಹದೇಶ್ವರಬೆಟ್ಟದಲ್ಲಿ ಫೆ.26ರಂದು ಶಿವರಾತ್ರಿ ಜಾತ್ರಾ ಮಹೋತ್ಸವ ನೆರವೇರಲಿದ್ದು. ಕಳೆದ ಒಂದು ವಾರದಿಂದ ನಾನಾ ಕಡೆಗಳಿಂದ ಲಕ್ಷಾಂತರ ಸಂಖ್ಯೆ ಯಲ್ಲಿ ಪಾದಯಾತ್ರಿಗಳು ಆಗಮಿಸುತ್ತಿದ್ದು. ಕಳೆದ ಎರಡು ದಿನಗಳ ಹಿಂದಷ್ಟೆ ಮಧುವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಮೈಸೂರು ಮೂಲದ ಸ್ವಾಮಿ ಎಂಬಾತನಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದನು. ಈ ಹಿನ್ನೆಲೆಯಲ್ಲಿ ಎಚ್ಚತ್ತ ಪೊಲೀಸ್ ಇಲಾಖೆ ರಾತ್ರಿ ಸಂಚಾರ ಮಾಡುವ ಪಾದಯಾತ್ರಿಗಳಿಗೆ ಅರಿವು ಕಾರ್ಯಕ್ರಮ, ನಿರ್ಭಯ ಬೈಕ್ ಗಸ್ತು ಇತರ ಕ್ರಮಗಳನ್ನು ತೆಗೆದುಕೊಂಡಿದ್ದು. ಇದೀಗ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಗಳಲ್ಲಿ ಸಂಚಾರ ನಿಮಯಮಗಳ ಫ್ಲೆಕ್ಸ್ ಅಳವಡಿಸಿದ್ದಾರೆ.
ರಸ್ತೆಯ ಬದಿಯಲ್ಲಿ ಜಾಗರೂಕತೆಯಿಂದ ಚಲಿಸುವುದು, ಹಿಂದೆ ಬರುವ ವಾಹನಗಳನ್ನು ನೋಡಿ ಚಲಿಸುವುದು, ರಾತ್ರಿ ಸಮಯದಲ್ಲಿ ಪಾದಯಾತ್ರೆ ಮಾಡದೆ ವಿಶ್ರಾಂತಿ ಮಾಡುವುದು, ಹಗಲು ಸಮಯದಲ್ಲಿ ಮಾತ್ರ ಪಾದಯಾತ್ರೆ ಮಾಡುವುದು, ರಸ್ತೆಯ ಬಿಳಿ ಗೆರೆಯಿಂದ ಆಚೆ ಚಲಿಸುವುದು, ಗುಂಪು ಗುಂಪಾಗಿ ಚಲಿಸದೆ ಒಬ್ಬೊಬ್ಬರಾಗಿ ಚಲಿಸುವುದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಬಾರದು. ರಸ್ತೆ ಬದಿಯಲ್ಲಿ ವಿಶ್ರಾಂತಿ ಮಾಡಬಾರದು ಎಂಬ ಸೂಚನೆಯ ಬರಹಗಳನ್ನು ಫ್ಲೆಕ್ಸ್‌ಗಳಲ್ಲಿ ಬರೆದು ಅರಿವು ಮೂಡಿಸಲಾಗುತ್ತಿದೆ.