ಜಿಲ್ಲೆ

ಪಾದಚಾರಿ ಮೇಲೆ ಕಾರು ಹರಿದು ವ್ಯಕ್ತಿ ಸಾವು

ಹಾಸನ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ವ್ಯಕ್ತಿಯೊಬ್ಬರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಮೀಸೆತಿಮ್ಮನಹಳ್ಳಿ ಗ್ರಾಮದ ಕೆಂಪನಾಯ್ಕ (65) ಮೃತ ಕೂಲಿ ಕಾರ್ಮಿಕ.
ಶುಂಠಿ ಕೆಲಸಕ್ಕೆಂದು ತಿಂಗಳ ಹಿಂದೆ ಹೊಳೇನರಸೀಪುರ ತಾ. ಕಸಬಾ ಹೋ. ಉಲಿವಾಲಕೊಪ್ಪಲು ಗ್ರಾಮಕ್ಕೆ ಬಂದು ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ಫೆ.5ರಂದು ರಾತ್ರಿ 8.45ರ ಸಮಯದಲ್ಲಿ ಕೆಂಪನಾಯ್ಕ ಅವರು ಬಹಿರ್ದೆಸೆಗೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೊಳೆನರಸೀಪುರ ಕಡೆಯಿಂದ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಕಾರಿನ ಚಕ್ರ ಹೊಟ್ಟೆಯ ಮೇಲೆ ಹರಿದು ತೀವ್ರಸ್ವರೂಪದಲ್ಲಿ ಗಾಯಗೊಂಡ ಕೆಂಪನಾಯ್ಕ ಅವರನ್ನು ಸ್ಥಳೀಯರು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಕೆಂಪನಾಯ್ಕ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ಪತ್ನಿ ಕೆಂಪಮ್ಮ ಹೊಳನರಸೀಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿ ೆಕೈಗೊಂಡಿದ್ದಾರೆ.