ಭಾಲ್ಕಿ: ತಾಲೂಕಿನ ಮಳಚಾಪುರದ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಲಕ್ಷ್ಮೀಬಾಯಿ ಚಂದ್ರಶೇಖರ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಜಗದೇವಿ ಅಮೃತ ರಾಜನಾಳೆ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು. ಲಕ್ಷ್ಮೀಬಾಯಿ ಹಾಲಿ ಅಧ್ಯಕ್ಷರಿದು, ಪುನರಾಯ್ಕೆಯಾಗಿದ್ದಾರೆ.
ಸದಸ್ಯರಾದ ಸಗುಣಾ ರಾಠೋಡ್, ಪ್ರವೀಣಕುಮಾರ ಪಾಟೀಲ್, ಜಗದೇವಿ ಸ್ವಾಮಿ, ತುಕಾರಾಮ ಏಣಕುರೆ, ಘಾಳೆಪ್ಪ ಮೈಲೂರೆ, ಅಫ್ರೋಜ್ ಸೈಯದ್ ಹಾಜಿ, ಮಸ್ತಾನ್ ಮುಲ್ಲಾ, ಸಂಗಮ್ಮ ನಾಗಪ್ಪ, ಕಮಳಾಬಾಯಿ ಶಿವಾಜಿ, ಜೈಲಸಿಂಗ್ ಜೇಮ್ಲು ಇದ್ದರು.
ನಂತರ ವಿಜಯೋತ್ಸವ ನಡೆಯಿತು. ಬಿಎಸ್ಎಸ್ಕೆ ಮಾಜಿ ಅಧ್ಯಕ್ಷ ಸಂಗಮೇಶ ಪಾಟೀಲ್, ಪ್ರಮುಖರಾದ ರಾಜಕುಮಾರ ಪಾಟೀಲ್ ಖಾನಾಪುರ, ಅಮರೇಶ್ವರ ಪಾಟೀಲ್, ಶಿವಕುಮಾರ ಪಾಟೀಲ್, ಮಲ್ಲಿಕಾರ್ಜುನ ಭಾಲ್ಕೆ, ದತ್ತು ಮಾಶೆಟ್ಟೆ, ವಿಕ್ರಂ ಪಾಟೀಲ್, ವಿನೋದ ರುದನೂರ ಇತರರಿದ್ದರು.