ಚಿತ್ರದುರ್ಗ: ಪಾಕಿಸ್ತಾನದ ವಿರುದ್ಧದ ಕೇಂದ್ರ ಸರ್ಕಾರದ ಯಾವುದೇ ಕ್ರಮಗಳಿಗೆ ದೇಶದ ಜನರ ಬೆಂಬಲವಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಸಂಬಂಧಗಳನ್ನು ಕಡಿದು, ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಉಗ್ರವಾದದ ವಿರುದ್ಧ ಹಲವು ದೇಶಗಳು ಭಾರತದ ಜತೆಯಾಗಿವೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿರುವ ಪಾಕ್ ನಾಗರಿಕರನ್ನು ಹುಡುಕಿ ಕ್ರಮ ಜರುಗಿಸಬೇಕು. ಬಾಂಗ್ಲಾ ಅಕ್ರಮ ನುಸುಳಕೋರರೂ ಭಾರತಕ್ಕೆ ಅಪಾಯಕಾರಿ. ಪಾಕ್‌ನಾಗರಿಕರ ಪರ ಮೃದುಧೋರಣೆ ಅನುಸರಿಸದೆ, ದೇಶದ ಸುರಕ್ಷತೆ ದೃಷ್ಟಿಯಿಂದ ಅವರನ್ನು ಹಿಂದಕ್ಕೆ ಕಳಿಸುವಂತೆ ಕಾರಜೋಳ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಭಾವನಾತ್ಮಕ ಸಮಸ್ಯೆಗಳೊಂದಿಗೆ ದಿನದ 24 ತಾಸು ಸಿಎಂ ವೋಟ್‌ಬ್ಯಾಂಕ್ ರಾಜಕಾರಣದ ಆಲೋಚನೆಯಲ್ಲಿರುತ್ತಾರೆ. ನುಡಿದಂತೆ ನಡೆದಿದ್ದೇವೆ ಎನ್ನುವ ಇವರು ಪದವೀಧರರಿಗೆ ಭತ್ಯೆ ಕೊಡುತ್ತಿಲ್ಲ. ಅಧಿಕಾರಿ, ಗುತ್ತಿಗೆದಾರರು ಹಾಗೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3500ಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಆಸ್ಪಶ್ಯರು ಇವತ್ತಿಗೂ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದಾರೆ. ಇವರ ಏಳಿಗೆಗೆ ಒಳ ಮೀಸಲು ಜಾರಿಗೊಳಿಸದೆ,ಸಹಿ ಇಲ್ಲದ ಜಾತಿ ಜನಗಣತಿ ಮೂಲ ವರದಿಯನ್ನು ಸಿಎಂ ಕುರ್ಚಿಯಡಿಗೆ ಹಾಕಿ ಕಳೆದಿದೆ ಎನ್ನುತ್ತಿದ್ದಾರೆ. ಮೊದಲ ಸಂಪುಟದಲ್ಲೇ ಒಳಮೀಸಲು ಜಾ ರಿಗೊಳಿಸುವುದಾಗಿ ಚಿತ್ರದುರ್ಗದಲ್ಲಿ ಹೇಳಿದ್ದ ಕಾಂಗ್ರೆಸ್,ಶೋಷಿತರೊಂದಿಗೆ ಮೋಸದಾಟವಾಡುತ್ತಿದೆ. ವರದಿಯನ್ನು ಈ ಸರ್ಕಾರ ಕದ್ದಿದೆ. ಎರಡು ನಾಲಿಗೆಗಳಿರುವ ಕಾಂಗ್ರೆಸ್ಸಿನಿಂದ ದಲಿತರ ಉದ್ಧಾರ ಸಾಧ್ಯವಿಲ್ಲ. ಪರಿಶಿಷ್ಟ ಜಾತಿಗಳ ಸಮೀಕ್ಷೆ ಕೂಡ ಸರಿಯಾಗಿ ನಡೆಯ ವುದೇ ಎಂಬ ಅನುಮಾನವಿದೆ. ಒಳ ಮೀಸಲು ಜಾರಿ ಸಂಬಂಧ ರಚಿಸಿರುವ ಸಮನ್ವಯ ಸಮಿತಿಯನ್ನು ಸಿಎಂ ಸರಿಪಡಿಸಬೇಕಿದೆ ಎಂದರು.
ನಾಯಕರ ಒತ್ತಾಯಕ್ಕೆ ಮಣಿದು ಕೇಂದ್ರ ಜಾತಿ ಜನಗಣತಿಗೆ ಮುಂದಾಗಿದೆ ಎಂಬ ಕಾಂಗ್ರೆಸ್ಸಿಗರ ಮಾತು ಸತ್ಯಕ್ಕೆ ದೂರ. ಮಹಿಳಾ ಮೀಸಲು ವಿಧೇಯಕದನ್ವಯ ಸಂಸತ್,ವಿಧಾನಸಭಾ ಚುನಾವಣೆಗಳಲ್ಲಿ ಶೇ.50 ಮೀಸಲು ಹಾಗೂ ಮತ್ತೆ ಇದರಡಿ ಒಳ ಮೀಸಲು, ಮಹಿಳಾ ಸಬಲೀಕರಣ,ಸಾಮಾಜಿಕ,ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದವರಿಗೆ ಸವಲತ್ತು ಒದಗಿಸಲು ಗಣತಿಯ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ಅಗತ್ಯವಿದೆ ಹೊರತು,ರಾಜಕೀಯ ಕಾರಣಕ್ಕಲ್ಲ.
ಆರ್ಥಿಕ ತಜ್ಞ,ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಲೋಕಸಭೆಗೆ ಅವಿರೋಧ ಆಯ್ಕೆ ಮಾಡಿದ್ದರೆ ಕಾಂಗ್ರೆಸ್ ಮುಳುಗುತ್ತಿತ್ತಾ?60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ದಲಿತರ ಏಳಿಗೆಗೆ ಏನೂ ಮಾಡಲಿಲ್ಲ. ಬುದ್ದಿಜೀವಿಗಳೆಂದರೆ ಒಂದು ಪಕ್ಷವನ್ನು ಒಲೈಸುವಂಥವರು ಎಂದು ಕಾರಜೋಳ ಹೇಳಿದರು.
ಪಕ್ಷದ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ,ಜಿ.ಟಿ.ಸುರೇಶ್‌ಸಿದ್ದಾಪುರ,ಸಂಪತ್‌ಕುಮಾರ್,ಡಾ.ಸಿದ್ದಾರ್ಥಗುಂಡಾರ್ಫಿ,ಬಾಳೆ ಕಾಯಿ ರಾಮ್‌ದಾಸ್,ಜಯಪಾಲಯ್ಯ,ಲೋಕೇಶ್,ನಾಗರಾಜ್,ಕೆ.ಟಿ.ಕುಮಾರಸ್ವಾಮಿ,ವೆಂಕಟೇಶ್‌ಯಾದವ್,ಮೋಹನ್,ಶೈಲೇಶ್, ನಾಗರಾಜ್‌ಬೇದ್ರೆ ಇತರರು ಇದ್ದರು.
ಅವಿರೋಧ ಆಯ್ಕೆ ಆಗಬೇಕಿತ್ತು
ಸ್ವಾತಂತ್ರೊೃೀತ್ತರದ ಆರಂಭಿಕ ಚುನಾವಣೆಗಳಲ್ಲಿ ಸಂಸತ್ ಲೋಕಸಭೆ ಸ್ಪೀಕರ್, ರಾಜ್ಯಸಭೆ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡು ವ ಸಂಪ್ರದಾಯವಿತ್ತು ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು. ಅತ್ಯಂತ ಮೇದಾವಿ, ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರ ಅವಿರೋಧ ಆಯ್ಕೆಗೆ ಸಹಕರಿಸದೆ ಕಾಂಗ್ರೆಸ್ ಅವರನ್ನು ಸೋಲಿಸಿತು. ಪ್ರತಿಪಕ್ಷಗಳ ಮನವಿಗೂ ಅಂದು ಕಾಂಗ್ರೆಸ್ ಸ್ಪಂದಿಸಲಿಲ್ಲ. ಸ್ವತಃ ಪಂಡಿತ್‌ಜವಾಹರಲಾಲ್ ನೆಹರು, ಅಂಬೇಡ್ಕರ್ ವಿರುದ್ಧ ಪ್ರಚಾರ ನಡೆಸಿದ್ದರು ಎಂದರು.
-----