ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರು ಪಾಕಿಸ್ತಾನ ವಿರುದ್ದ ಘೋಷಣೆ ಕೂಗಿ ಪಾಕ್ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ವಿಎಚ್‌ಪಿ ಜಿಲ್ಲಾಧ್ಯಕ್ಷ ಗಂಗಾಧರ ಮುರನಾಳ, ಡಾ.ಗಿರೀಶ ಮಾಸೂರಕರ್, ಡಾ.ಶೇಖರ ಮಾನೆ, ನರಸಿಂಹ ಆಲೂರ, ವಿಜಯ ಸುಲಾಖೆ, ಶಿವಕುಮಾರ ಮೇಲ್ನಾಡ, ಶಿವರಾಮ್ ಹೆಗಡೆ, ಸಂಗನಗೌಡ ಗೌಡರ ಇದ್ದರು.  
ಜಿಲ್ಲೆ

ಪಾಕ್ ಧ್ವಜ ಸುಟ್ಟು ಆಕ್ರೋಶ

ಬಾಗಲಕೋಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರು ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರು ಪಾಕಿಸ್ತಾನ ವಿರುದ್ದ ಘೋಷಣೆ ಕೂಗಿ ಪಾಕ್ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಡಾ.ಗಿರೀಶ ಮಾಸೂರಕರ್ ಮಾತನಾಡಿ, ಭಾರತ ದೇಶದ ವಿರುದ್ಧ ಯಾರೇ ದಾಳಿ ಮಾಡಿದರು ಅದನ್ನು ಎದುರಿಸುವಂತಹ ಶಕ್ತಿ ನಮ್ಮಲ್ಲಿ ಇದೆ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಬೇಕು. ಉಗ್ರರನ್ನು ಸದೆಬಡಿಯುವ ಕೆಲಸ ಮಾಡಬೇಕಾಗಿದೆ. ಮೃತಪಟ್ಟ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಡಾ.ಶೇಖರ ಮಾನೆ ಮಾತನಾಡಿ, ಉಗ್ರರ ದಾಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಪ್ರಧಾನಿ ಮೋದಿಯವರು ಈಗಾಗಲೇ ಉಗ್ರರಲ್ಲಿ ನಡುಕು ಹುಟ್ಟಿಸಲು ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ ಎಂದರು.

ಸ0ಗಣ್ಣ ಕುಪ್ಪಸ್ತ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಕೃತ್ಯ ಖಂಡನೀಯ. ದೇಶವು ಒಂದಾಗಿ ಹೋರಾಡಬೇಕಾಗಿದೆ ಎಂದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಗಂಗಾಧರ ಮುರನಾಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಮ ಮುಂದಡಾ, ನರಸಿಂಹ ಆಲೂರ, ವಿಜಯ ಸುಲಾಖೆ, ಶಿವಕುಮಾರ ಮೇಲ್ನಾಡ, ಶಿವರಾಮ್ ಹೆಗಡೆ, ಸಂಗನಗೌಡ ಗೌಡರ, ಮಲ್ಲಿಕಾರ್ಜುನ ಸುರಪುರ, ರಾಮು, ರಾಜು ನಾಯಕ, ಅಪ್ಪಣ್ಣ ಪೂಜಾರ, ಮಂಜುನಾಥ ಬಳೂರಗಿ, ಕಳಕಪ್ಪ ಬಾದೋಡಗಿ, ಗಣೇಶ ದುದಾನಿ, ವಿರುಪಾಕ್ಷ ಅಮೃತಕರ, ಚಂದ್ರಕಾ0ತ ಕೇಸನೂರ್, ಮನೋಜ್ ಕರೋಡೆವಾಲ, ಅಶೋಕ್ ಮಹೇಂದ್ರಕರ್, ಬಸವರಾಜ್ ಪತ್ತಾರ್, ಸುರೇಶ್ ನಾಯಕ್ ಇತರರು ಇದ್ದರು.