ಜಿಲ್ಲೆ

ಪಾಂಡಿತ್ಯ ಯೂರೋ ಶಾಲೆಯಲ್ಲಿ ಕ್ರೀಡಾ ದಿನಾಚರಣೆ

ಹಾಸನ: ನಗರದ ಪಾಂಡಿತ್ಯ ಯೂರೋ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ವೈದ್ಯ ಕಾಲೇಜಿನ ಆವರಣದಲ್ಲಿರುವ ಶಿವನ ದೇವಾಲಯದ ಬಳಿ ಕ್ರೀಡಾ ಜ್ಯೊತಿ ಮೆರವಣಿಗೆಗೆ ಬೈಕ್ ರೇಸರ್, ಬಿಗ್ ಬಾಸ್ ಸೀಸನ್ 8ರ ರನ್ನರ್ ಅಪ್ ಕೆ.ಪಿ. ಅರವಿಂದ್, ಪರಿಣಿತ ಡೆವಲಪರ್ಸ್ ಮಾಲೀಕ ಚಂದ್ರಶೇಖರ್ ಮತ್ತು ಪಾಂಡಿತ್ಯ ಯೂರೋ ಶಾಲೆಯ ಟ್ರಸ್ಟಿ ರಮ್ಯಾ ಚಂದ್ರಶೇಖರ್ ಹಾಗೂ ಪ್ರಾಂಶುಪಾಲ ಕೃಷ್ಣನ್ ಕೌಶಿಕ್ ಚಾಲನೆ ನೀಡಿದರು.

ಶಾಲೆಯ ಸ್ಪೋರ್ಟ್ಸ್ ಕ್ಯಾಪ್ಟನ್ ಅರವಿಂದ್ ಕೃಷ್ಣ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯನ್ನು ಮೆರವಣಿಗೆ ಮೂಲಕ ಹಾಗೂ ಅತಿಥಿಗಳು ಮತ್ತು ಗಣ್ಯರನ್ನು ತೆರೆದ ಜೀಪಿನಲ್ಲಿ ಶಾಲಾ ಆವರಣಕ್ಕೆ ಕರೆತರಲಾಯಿತು.
ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ವಿದ್ಯೆಯೊಂದಿಗೆ ಶಿಸ್ತು ರೂಪಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ಹೇಳಿದರು.

ಶಾಲೆಯ ಮಕ್ಕಳು ಯೋಗ, ಪಿರಮಿಡ್ ಮತ್ತು ಕರಾಟೆ ಪ್ರದರ್ಶನ ನೀಡಿದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶಾರದಮ್ಮ ಇದ್ದರು.