ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಸಾಗರದಲ್ಲಿ ಮಹಿಳಾ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚೂಡಾಮಣಿ ರಾಮಚಂದ್ರ, ನಂದಾ ಗೊಜನೂರು, ಪುಷ್ಪಾ ಮಲ್ಲಿಕಾರ್ಜುನ, ಭವಾನಿ ಪುಟ್ಟಪ್ಪ ಇತರರಿದ್ದರು.  
ಜಿಲ್ಲೆ

ಪಹಲ್ಗಾಮ್‌ನಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ

ಟಿ.ಎಚ್.ಸಂತೋಷ್ ಕುಮಾರ್

ಸಾಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಅಮಾಯಕ ಪ್ರವಾಸಿಗರ ಆತ್ಮಕ್ಕೆ ಶಾಂತಿಕೋರಿ ಗುರುವಾರ ಸಂಜೆ ಸಾಗರದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ನೇಹಸಾಗರ ಸ್ವ ಸಹಾಯ ಮಹಿಳಾ ಮಂಡಳಿ, ಸಾಗರ ಟೌನ್ ಮಹಿಳಾ ಸಮಾಜ, ಅಕ್ಕನ ಬಳಗ, ಜೀವನ್ಮುಖಿ ಹೀಗೆ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳಾದ ಚೂಡಾಮಣಿ ರಾಮಚಂದ್ರ, ನಂದಾ ಗೊಜನೂರು, ಪುಷ್ಪಾ ಮಲ್ಲಿಕಾರ್ಜುನ, ಭವಾನಿ ಪುಟ್ಟಪ್ಪ, ಜ್ಯೋತಿ ಶಶಿಧರ್, ಪ್ರಭಾ ವೆಂಕಟೇಶ್, ಜಯಂತಿ, ಸೌದಾಮಿನಿ, ಸವಿತಾ ಮತ್ತಿತರರಿದ್ದರು.