filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0000,0.0000; brp_del_sen:0.0000,0.0000; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (6, 0);aec_lux: 103.24858;aec_lux_index: 0;albedo: ;confidence: ;motionLevel: 0;weatherinfo: null;temperature: 30; 
ಜಿಲ್ಲೆ

ಪಲ್ಲಕ್ಕಿಗಳಿಗೆ ಸಂಭ್ರಮದ ಬೀಳ್ಕೊಡುಗೆ

ಐನಾಪುರ: ಸಮೀಪದ ಮೋಳೆ ಗ್ರಾಮದ ಓಘ ಸಿದ್ದೇಶ್ವರ 10ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಪಲ್ಲಕ್ಕಿಗಳ ಬೀಳ್ಕೊಡುಗೆ ಸಂಭ್ರಮದಿಂದ ಜರುಗಿತು.

ಸಿದ್ದೇಶ್ವರ ದೇವರಿಗೆ ಬೆಳಗ್ಗೆ ಮಹಾಪೂಜೆ ಹಾಗೂ ನೈವೇದ್ಯ ಸಲ್ಲಿಸಲಾಯಿತು. ಜಾತ್ರೆ ಅಂಗವಾಗಿ ಆಯೋಜಿಸಿದ್ದ ಕುದುರೆ ಶರ್ಯತ್ತಿನಲ್ಲಿ ಚಿಂಚಲಿ ಗ್ರಾಮದ ಕುಮಾರ ಪೂಜಾರಿ ಅವರ ಕುದುರೆ ಪ್ರಥಮ, ಸಾಂಗಲಿ ಪಟ್ಟಣದ ಹರ್ಷಲ್ ಕಾಂಬಳೆ ಅವರ ಕುದರೆ ದ್ವಿತೀಯ ಹಾಗೂ

ನರವಾಡ ಗ್ರಾಮದ ಸುಧೀರ ನಾಯಿಕ ಕುದುರೆ ತೃತೀಯ ಸ್ಥಾನ ಪಡೆಯಿತು.

ವಿವಿಧ ಗ್ರಾಮಗಳಿಂದ ಆಗಮಿಸಿದ ದೇವರ ಪಲ್ಲಕ್ಕಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಡಾ.ಮಂದಗೊಂಡ ಭರಮಒಡೆಯರ, ಬಾಳಪ್ಪ ನರಟ್ಟಿ, ಬಸವರಾಜ ತೇಲಿ, ಧರ್ಮಾಜಿ ಕೋಳೆಕರ, ಭೂತಾಳಿ ಥರಥರೆ, ಭರತೇಶ ಪಡನಾಡ, ವಿಠೋಬಾ ಕೋಳೆಕರ, ಸಿದ್ದಪ್ಪ

ಪೂಜಾರಿ, ಮುರಗೆಪ್ಪ ಹಳಮನಿ, ಚಿದಾನಂದ ಹಳ್ಳೋಳ್ಳಿ, ಮಹೇಶ ಕೋಳೆಕರ, ಸಿದರಾಯ ಡಕ್ಕಾವಡೆಯರ ಇತರರಿದ್ದರು.