filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಪಲ್ಟಿಯಾದ ಲಾರಿ ತೆರವುಗೊಳಿಸದೆ ಸಂಚಾರಕ್ಕೆ ಸಮಸ್ಯೆ

ಹೊಳೆನರಸೀಪುರ: ತಾಲೂಕಿನ ದೊಡ್ಡ ಕಾಡನೂರು ಸಮೀಪ ಬಾಚನಹಳ್ಳಿ ಕ್ರಾಸ್‌ನಲ್ಲಿ ಮಿನಿ ಲಾರಿ ಪಲ್ಟಿಯಾಗಿ ರಸ್ತೆಯಲ್ಲೇ ಬಿದ್ದಿದ್ದು, ತೆರವುಗೊಳಿಸದ ಕಾರಣ ಸಂಚಾರಕ್ಕೆ ಅಡಚಣೆಯಾಗಿದೆ.

ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೊಡ್ಡ ಕಾಡನೂರಿನಿಂದ ಇಳಿಜಾರಿನ ತಿರುವು ರಸ್ತೆಯಲ್ಲಿ ಶುಕ್ರವಾರ ರಾತ್ರಿ ಮಿನಿ ಲಾರಿಯೊಂದು ಆಯತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ತಿರುವು ರಸ್ತೆಯಲ್ಲೇ ವಾಹನ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮೈಸೂರು ಕಡೆಯಿಂದ ಬರುವ ದೊಡ್ಡ ವಾಹನಗಳು ಸಂಚರಿಸಲು ತೊಡಕುಂಟಾಗಿದ್ದು, ಬಲಭಾಗದ ರಸ್ತೆಯಲ್ಲಿ ತೆರಳುವಂತಾಗಿದೆ. ತಿರುವು ರಸ್ತೆ ಆಗಿರುವುದರಿಂದ ಅಪಘಾತವಾಗುವ ಸಂಭವ ಹೆಚ್ಚಾಗಿದೆ.

ತಗ್ಗು ಪ್ರದೇಶದಲ್ಲಿ ಅಪಘಾತ ಆಗಿರುವುದರಿಂದ ಇಳಿಜಾರಿನಲ್ಲಿ ಬರುವ ವಾಹನಗಳಿಗೆ ಗೋಚರವಾಗುವುದಿಲ್ಲ. ವಾಹನ ಚಾಲಕರು ಎಚ್ಚರಿಕೆಯಿಂದ ರಸ್ತೆ ಗಮನಿಸದಿದ್ದರೆ ಬಿದ್ದಿರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಶುಕ್ರವಾರ ರಾತ್ರಿ ಬಿದ್ದಿರೋ ವಾಹನವನ್ನು ಶನಿವಾರ ಸಂಜೆ ಆದರೂ ತೆರವುಗೊಳಿಸಿದೆ ಇರುವುದರಿಂದ ಅಪಘಾತಗಳಾಗುವ ಆತಂಕ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಲಾರಿ ಬಿದ್ದಿದ್ದರೂ ಸಂಚಾರ ಹಾಗೂ ರಸ್ತೆ ಸುರಕ್ಷತೆ ಪಾಲಿಸಬೇಕಾದ ಪೊಲೀಸರು ಕ್ರಮವಹಿಸಲು ಮುಂದಾಗದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.