ಹನುಮಸಾಗರ ಸಮೀಪದ ಶ್ರೀ ಚಂದಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲಾಯಿತು. ಪ್ರಾಚಾರ್ಯ ಜಿ.ಮಹೇಂದ್ರ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಸಂಚಾಲಕ ಬಿ.ಹಿತೇಶ, ಉಪನ್ಯಾಸಕರಾದ ಮಹಾಂತೇಶ ಜೀವಣ್ಣನವರ, ಕೆ.ಸರಸ್ವತಿ, ಎಂ.ಜೀವಿತಾ, ಮಂಜುನಾಥ ಸೋಮನಕಟ್ಟಿ, ಬಿ.ವಿ.ಮುನವಳ್ಳಿ, ಪಿ.ಎಂ.ದಿವಾನಂದ ಇತರರಿದ್ದರು. 
ಜಿಲ್ಲೆ

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಆರೋಗ್ಯ ಉಳಿಸಿ

Kopala - Desk - Eraveni

ಹನುಮಸಾಗರ: ಭಕ್ತರು ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಪ್ಲಾ ಸ್ಟಿಕ್ ಹಾಕುವುದನ್ನು ನಿಲ್ಲಿಸಬೇಕು ಎಂದು ಪ್ರಾಚಾರ್ಯ ಜಿ.ಮಹೇಂದ್ರ ಹೇಳಿದರು.

ಸಮೀಪದ ಶ್ರೀ ಚಂದಾಲಿಂಗೇಶ್ವರ ದೇವಸ್ಥಾನದಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶ್ರೀ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಪರಿಸರವನ್ನು ರಕ್ಷಿಸಿದರೆ, ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಇತಿಮಿತಿಯಲ್ಲಿ ಬಳಕೆ ಮಾಡಿ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪ್ಲಾಸ್ಟಿಕ್‌ನಿಂದ ಮಾಡಿದ ಲೋಟ, ತಟ್ಟೆ ಸಾಮಾಗ್ರಿಗಳನ್ನು ತರುವ ಬದಲಾಗಿ ಹಾಳೆಯಿಂದ ಮಾಡಿದ ವಸ್ತುಗಳನ್ನು ಉಪಯೋಗಿಸಿ.

ಬಳಕೆ ನಂತರ ಎಲ್ಲೆಂದರಲ್ಲಿ ಬಿಸಾಡ ಬಾರದು. ಪವಿತ್ರ ಸ್ಥಳಗಳ ಸ್ವಚ್ಚತೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.
ದೇವಸ್ಥಾನದ ಸುತ್ತಲಿನ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ವಿದ್ಯಾರ್ಥಿಗಳು ವಿಲೇವಾರಿ ಮಾಡಿದರು.

ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ಲಾಸ್ಟಿಕ್‌ನಿಂದ ಉಂಟಾಗುವ ತೊಂದರೆಯನ್ನು ವಿವರಿಸಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಸಂಚಾಲಕ ಬಿ.ಹಿತೇಶ, ಉಪನ್ಯಾಸಕರಾದ ಮಹಾಂತೇಶ ಜೀವಣ್ಣನವರ, ಕೆ. ಸರಸ್ವತಿ , ಎಂ ಜೀವಿತಾ, ಮಂಜುನಾಥ ಸೋಮನಕಟ್ಟಿ, ಬಿ.ವಿ.ಮುನವಳ್ಳಿ, ಪಿ.ಎಂ.ದಿವಾನಂದ ಇದ್ದರು.