ಚಿಕ್ಕಹಳ್ಳ ಗ್ರಾಮಸ್ಥ ದೀಕ್ಷಿತ್ 
ಜಿಲ್ಲೆ

ಪರ್ಯಾಯ ರಸ್ತೆ ಮಾಡಿಕೊಡದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ

ಚಿಕ್ಕಮಗಳೂರು: ತಾಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ ತಿರುಗಾಡುತ್ತಿದ್ದ ರಸ್ತೆಗೆ ಖಾಸಗಿ ಭೂಮಾಲೀಕನೊಬ್ಬ ಬೇಲಿ ಹಾಕಿದ್ದು, ಆತ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಯಲ್ಲಿ ಜಿಲ್ಲಾಡಳಿತ ಪರ್ಯಾಯ ರಸ್ತೆ ಮಾಡಿಕೊಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಮುಷ್ಕರ ಹೂಡಲು ನಿರ್ಧರಿಸಲಾಗಿದೆ ಎಂದು ಚಿಕ್ಕಹಳ್ಳ ಗ್ರಾಮಸ್ಥ ದೀಕ್ಷಿತ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಹಳ್ಳ ಗ್ರಾಮದಲ್ಲಿ ೧೨ ಮನೆಗಳಿದ್ದು, ಎಲ್ಲರೂ ಸಣ್ಣ ಬೆಳೆಗಾರರು, ಕೂಲಿ ಕಾರ್ಮಿರಾಗಿದ್ದಾರೆ. ಹಿಂದಿನಿAದಲೂ ತಿರುಗಾಡುತ್ತಿದ್ದ ರಸ್ತೆಯ ವಿಷಯದಲ್ಲಿ ಗ್ರಾಮಸ್ಥರಿಗೆ ಭೂಮಾಲೀಕರಿಬ್ಬರಿಂದ ನಿರಂತರ ಅಡ್ಡಿ ಆತಂಕಗಳು ಎದುರಾಗಿವೆ. ಈಗ ತಿರುಗಾಡಲು ದಾರಿಯಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತ ಬೆಳೆಗಾರರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು

ತಮ್ಮದೇ ಹಿಡುವಳಿ ಜಾಗ ಎಂದು ನ್ಯಾಯಾಲಯದಿಂದ ತೀರ್ಪು ತಂದಿರುವ ಭೂಮಾಲೀಕರು ಕಳೆದ ಎರಡು ಮೂರು ತಲೆಮಾರುಗಳಿಂದ ತಿರುಗಾಡುತ್ತಿದ್ದ ದಾರಿಯನ್ನು ಬಂದ್ ಮಾಡಿದ್ದಾರೆ. ಈಗ ನಾವು ಪಟ್ಟಣ, ನಗರ ಪ್ರದೇಶಕ್ಕೆ ಹೋಗಲು ದಾರಿಯಿಲ್ಲದೆ ಕಾಡು ಮೇಡು, ಖಾಸಗಿ ತೋಟ ಅಲೆದು ಸುತ್ತಿಬಳಸಿ ಮನೆ ಸೇರಬೇಕಿದೆ ಎಂದರು.

ವಾಹನಗಳಿದ್ದರೂ ರಸ್ತೆಯಿಲ್ಲದೆ ಮನೆಯಲ್ಲೇ ನಿಲ್ಲಿಸಿz್ದೆÃವೆ. ಆಸ್ಪತ್ರೆಗೆ ಹೋಗಬೇಕಾದರೆ ರೋಗಿಯನ್ನು ಹೊತ್ತು ತರಬೇಕಿದೆ. ಶಾಲೆ ಕಾಲೇಜಿಗೆ ಮಕ್ಕಳು ಓದಲು ಹೋಗದಂತಾಗಿದೆ. ಚಿಕ್ಕಹಳ್ಳಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರು ದಾರಿ ಇಲ್ಲದೆ ಬರುತ್ತಿಲ್ಲ, ಈ ಗ್ರಾಮಸ್ಥರು ಒಂದು ರೀತಿ ದ್ವೀಪದಲ್ಲಿ ಬಂಧಿಯಾದAತಾಗಿದ್ದು, ದಿಕ್ಕೇ ತೋಚದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಭೂಮಾಲೀಕರಿಬ್ಬರು ಒತ್ತುವರಿ ಮಾಡಿಕೊಂಡಿರುವ ೩೦ಕ್ಕೂ ಹೆಚ್ಚು ಎಕರೆ ಸರ್ಕಾರಿ ಕಂದಾಯ ಭೂಮಿಯಲ್ಲಿ ನಮಗೆ ಬದಲಿ ರಸ್ತೆ ಮಾಡಿಕೊಡುವಂತೆ ಜಿಲಾಧಿಕಾರಿಗೆ ಮನವಿ ಸಲ್ಲಿಸಿz್ದÉÃವೆ. ಅವರು ತಹಸಿಲ್ದಾರ್ ಕಡೆ ಬೊಟ್ಟು ಮಾಡಿದ್ದಾರೆ. ತಹಸಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿದರೇ ವಿನಾಃ ಈವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆಗಾಗಿ ಆಗ್ರಹಿಸಿ ಹಾಗೂ ಜಿಲ್ಲಾಡಳಿತದ ನಿರ್ಲಕ್ಷö್ಯ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಅಥವಾ ತಹಸಿಲ್ದಾರ್ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಮುಷ್ಕರ ಹೂಡಲು ನಿರ್ಧರಿಸಿz್ದÉÃವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕಾಳೇಗೌಡ, ಸುಧನ್ವ, ರಮೇಶ್, ಮೋಹನ್, ಮುರುಳಿ ಮತ್ತಿತರರಿದ್ದರು.