ಚಿಕ್ಕಮಗಳೂರಿನ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ ೨೬ರಿಂದ ಆಗಸ್ಟ್೨೪ರ ವರೆಗೆ ಆಯೋಜಿಸಿರುವ ಅಂಗಳದೆಡೆಗೆ ಮಂಗಳ ನುಡಿ-ನಡಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆಯ ಅಂಗವಾಗಿ ಸಿದ್ಧಾಂತ ಶಿಖಾಮಣಿ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ದೇವಿಗುರುಕುಲದ ಅಧ್ಯಕ್ಷ ವಿದ್ವಾನ್ ಡಾ.ದಯಾನಂದ ಮೂರ್ತಿಶಾಸ್ತಿç ಉದ್ಘಾಟಿಸಿದರು. ಚಟ್ನಳ್ಳಿ ಮಹೇಶ್, ಪ್ರಭುಲಿಂಗ ಶಾಸ್ತಿç, ರೋಹನ್ ಭಾರ್ಗವಪುರಿ, ಬಿಸಲೇಹಳ್ಳಿ ಸೋಮಶೇಖರ್ ಮತ್ತಿತರರಿದ್ದರು. 
ಜಿಲ್ಲೆ

ಪರೋಮೋಚ್ಛ ತಾತ್ವಿಕ ಗ್ರಂಥ ಸಿದ್ಧಾಂತ ಶಿಖಾಮಣಿ

ಚಿಕ್ಕಮಗಳೂರು: ಪರೋಮೋಚ್ಛ ತಾತ್ವಿಕ ಗ್ರಂಥ ಸಿದ್ಧಾಂತ ಶಿಖಾಮಣಿ. ಇದು ಸಮಸ್ತ ಜೀವಿಗಳ ಸಾರ್ಥಕ ಬದುಕಿನ ಬೋಧನೆಯನ್ನೊಳಗೊಂಡಿದೆ ಎಂದು ಸಾಹಿತಿ, ಚಿಂತಕ, ವಾಗ್ಮಿ, ವಚನಕಾರ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

ನಗರದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ ೨೬ರಿಂದ ಆಗಸ್ಟ್೨೪ರ ವರೆಗೆ ಆಯೋಜಿಸಿರುವ ಅಂಗಳದೆಡೆಗೆ ಮಂಗಳ ನುಡಿ-ನಡಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆಯ ಅಂಗವಾಗಿ ಸಿದ್ಧಾಂತ ಶಿಖಾಮಣಿ ಕುರಿತ ಉಪನ್ಯಾಸ ಕಾರ್ಯಕ್ರಮವನ್ನುz್ದೆÃಶಿಸಿ ಮಾತನಾಡಿದರು.

ಒಳ್ಳೆಯ ವಿಚಾರಗಳು, ಆಲೋಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವ ಪದ್ಧತಿ ಹಿಂದಿನಿAದಲೂ ನಮ್ಮಲ್ಲಿ ಬಂದಿದೆ. ಸಮಾಜ ಕಟ್ಟುವ ಸಾಹಿತ್ಯ ಶಕ್ತಿಯ ಧಾರ್ಮಿಕ ನಾಯಕತ್ವದ ಹುಟ್ಟು ಮತ್ತು ಮೂಲವನ್ನು ಕೆಣಕದೆ ಸದ್ವಿಚಾರಗಳನ್ನು ಗ್ರಹಿಸಿ ಅಳವಡಿಸಿಕೊಳ್ಳುವುದು ಸಮಾಜದ ಪ್ರಸ್ತುತ ಸನ್ನಿವೇಶ ಎಂದರು.

ವೃತ್ತಿಶ್ಬೆöÊತನ್ಯ ರೂಪಿಣೀ ಎಂಬ ಸಿದ್ಧಾಂತ ಶಿಖಾಮಣಿಯ ಪ್ರಮುಖ ಮಾತು ಅರ್ಥವತ್ತಾಗಿದೆ. ಕಾಯಕವೇ ಕೈಲಾಸವೆಂಬ ಬಸವಣನವರ ತತ್ವಕ್ಕೆ ಹೋಲಿಕೆಯಾಗುತ್ತದೆ. ಕಳಾಚೈತನ್ಯ ಎಂದರೆ ಕಾಯಕವನ್ನು ಜಗತ್ತಿನ-ಬದುಕಿನ ಚೈತನ್ಯವೆಂದು ಬಣ್ಣಿಸಿರುವುದು ಗಮನೀಯ. ಶಕ್ತಿ ಸಮನ್ವಿತ ಸರ್ವಶಕ್ತ ಶಿವನೆಂಬುದನ್ನು ಪ್ರತಿಪಾದಿಸಿದೆ. ಸಮಸ್ತ ಲೋಕ ನಿರ್ಮಾಣ ಸಮವಾಯ ಸ್ವರೂಪಿಣೀ ಎಂದಿದೆ. ಷಟ್‌ಸ್ಥಲ ಸಿದ್ಧಾಂತ ಪ್ರತಿಪಾದನೆಯನ್ನು ಗ್ರಂಥದಲ್ಲಿ ಗಮನೀಯವಾಗಿ ಕಾಣಬಹುದು ಎಂದು ಹೇಳಿದರು.

ಶ್ರೀಶಿವಯೋಗಿ ಶಿವಾಚಾರ್ಯರು ರಚಿಸಿದ ಸಿದ್ಧಾಂತ ಶಿಖಾಮಣಿ ಸಂಸ್ಕೃತದಲ್ಲಿ ಸಾಹಿತ್ಯಿಕ ಅಂಶಗಳನ್ನೂಳಗೊAಡ ಕ್ಲಿಷ್ಟ ಮಾತುಗಳ ಸಂಗ್ರಹ ಕಾಣಬಹುದು. ಕಬ್ಬಿಣದ ಕಡಲೆಯಂತಿರುವ ಸಿದ್ಧಾಂತ ಶಿಖಾಮಣಿಯ ಸಾರ ಸತ್ವವನ್ನು ಡಾ.ಜಚನಿ ಮತ್ತು ಸಿz್ದÉÃಶ್ವರ ಸ್ವಾಮಿಗಳು ಸರಳ ಸುಂದರವಾಗಿ ಚಿತ್ರಿಸಿದ್ದಾರೆ. ಬಹುತೇಕ ಎಲ್ಲ ಧರ್ಮ ಗ್ರಂಥಗಳಲ್ಲಿರುವAತಹ ಜೀವಪರ-ಲೋಕಹಿತ ಅಂಶಗಳೆ ಇದರಲ್ಲೂ ಪ್ರಧಾನವಾಗಿದೆ. ೧೨ನೆಯ ಶತಮಾನದ ವಚನಸಾಹಿತ್ಯ ಸರಳ ಮಾತುಗಳಲ್ಲಿ ಹೆಚ್ಚಾಗಿರುವುದರಿಂದ ಬೇಗ ಜನಮನಕ್ಕೆ ತಟ್ಟುತ್ತದೆ. ಅಲ್ಲಮಪ್ರಭು, ಚನ್ನಬಸವಣ್ಣ ಸೇರಿದಂತೆ ಹಲವು ವಚನಕಾರರ ಕೆಲ ವಚನಗಳು ನಮ್ಮ ವಿಶ್ಲೇಷಣೆಗೆ ನಿಲುಕಲಾರವು ಎಂಬುದೂ ಸತ್ಯ. ಸಾರ್ವಕಾಲೀಕ ಸತ್ಯ ಮತ್ತು ಸತ್ವದ ಪ್ರತಿಪಾದನೆ ಇಂದಿನ ಅಗತ್ಯ ಎಂದು ನುಡಿದರು.

ವೇದಾಗಮ, ಷಟ್‌ಸ್ಥಲ, ಜೀವೇಶ್ವರ ಯೋಗಪದ್ಮ ತರಣಿ, ಗೋಪ್ಯ ಚಿಂತಾಮಣಿ ಮತ್ತು ಭುಕ್ತಿ, ಮುಕ್ತಿ ಪ್ರಧಾಯಿನಿ ಎಂಬ ಸಿದ್ಧಾಂತ ಶಿಖಾಮಣಿಯ ಅರ್ಥವತ್ತಾದ ಮಾತುಗಳನ್ನು ಉಲ್ಲೇಖಿಸಿದ ಅವರು, ಆದಿ ಜಗದ್ಗುರು ರೇಣುಕರ ಅನುಭಾವಿಕ ಸೈದ್ಧಾಂತಿಕ ವಾಣಿ. ಬದುಕಿ ಬೆಳಕಿಗೆ ಬರುವ ವಾಣಿ ಎಂದÀÄ ಬಣ್ಣಿಸಿದರು.

ಜೀವ ಶಿವನಾಗುವ, ಮಾನವ ಮಹಾದೇವನಾಗುವ ಪ್ರಕ್ರಿಯೆಯಲ್ಲಿ ನಾವು ನಿರ್ವಹಿಸಬೇಕಾದ ಸಿದ್ಧಸೂತ್ರಗಳ ಒಟ್ಟು ಮೊತ್ತವೇ ಸಿದ್ಧಾಂತ ಶಿಖಾಮಣಿ. ೨೧ಪರಿಚ್ಛೇದ ೧,೪೦೦ಶ್ಲೋಕಗಳಲ್ಲಿ ವಿಸ್ತತವಾಗಿದೆ. ಸಾಕ್ಷಾತ್ ಪರಶಿವನೇ ಪಾರ್ವತಿಗೆ ಇದನ್ನು ಮೊದಲು ಬೋಧಿಸಿದ. ನಂತರ ಗಣಕೂಟಕ್ಕೆ ಬೋಧಿಸಲ್ಪಟಿತ್ತು. ತದನಂತರ ಗಣಕೂಟದ ಮುಖ್ಯಸ್ಥ ಆದಿರೇಣುಕರಾಗಿ ಭೂಲೋಕಕ್ಕೆ ಕಳುಹಿಸಲ್ಪಟ್ಟಿದ್ದು ಅವರು ಅಗಸ್ತö್ಯರಿಗೆ ಬೋಧಿಸಿದರೆಂಬ ವಿಷಯ ಗ್ರಂಥದಲ್ಲಿ ಹೇಳಲ್ಪಟ್ಟಿದೆ. ಸಾತ್ವಿಕತೆ, ಜನಮುಖಿ ಚಿಂತನೆಯಿAದ ಬದುಕಿಗೆ ಹೊಸ ಆಯಾಮ, ಸ್ಪೂರ್ತಿ ತಿರುವು ಕೊಡುವ ಮಹಾಗ್ರಂಥ ಇದಾಗಿದೆ ಎಂದು ತಿಳಿಸಿದರು.

ಸಿದ್ಧಾಂತ ಶಿಖಾಮಣಿಯ ೨ನೆಯ ಪರಿಚ್ಛೇದಲ್ಲಿ ಲಿಂಗತತ್ವವನ್ನು ವ್ಯಾಪಕವಾಗಿ ಹೇಳಲಾಗಿದೆ. ವೇದ, ಉಪನಿಷತ್ತು ಆಗಮ ಪುರಾಣಾದಿಯಲ್ಲಿ ನಿರೂಪಿತವಾದ ಸಿದ್ಧಾಂತ ತತ್ವವನ್ನು ೧೦೧ ಸ್ಥಲಗಳ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ನಿರೂಪಿಸಲಾಗಿದೆ. ಇದರ ಅನೇಕ ಶ್ಲೋಕಗಳ ಅರ್ಥವನ್ನು ಶರಣರು ತಮ್ಮ ಜೀವತತ್ವಗಳಲ್ಲಿ ಸರಳ ಸುಂದರವಾಗಿ ಹೇಳಿದ್ದಾರೆ. ವಿಭೂತಿ ಧರಿಸಿ, ಇಷ್ಟಲಿಂಗವನ್ನು ಕರದಲ್ಲಿ ಹಿಡಿದು ಭಕ್ತಿ ಶ್ರದ್ಧೆಯಿಂದ ಧ್ಯಾನ, ಪೂಜೆ ಮಾಡುವವರೆಲ್ಲರೂ ವೀರಶೈವ ಎಂದಿದೆ. ಇದರಲ್ಲಿ ಜಾತಿಮತ ಬೇಧವಿಲ್ಲದೆ ಲಿಂಗತತ್ವವನ್ನು ಉದಾತ್ತವಾಗಿ ಸಾರಲಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ದೇವಿಗುರುಕುಲದ ಅಧ್ಯಕ್ಷ ವಿದ್ವಾನ್ ಡಾ.ದಯಾನಂದ ಮೂರ್ತಿಶಾಸ್ತಿç, ಸಿದ್ಧಾಂತ ಶಿಖಾಮಣಿ ಕೇವಲ ವೀರಶೈವರಿಗೆ ಮಾತ್ರವಲ್ಲದೆ ಸಮಸ್ತ ಜೀವಲೋಕಕ್ಕೆ ಕಲ್ಯಾಣವನ್ನು ಬಯಸುವ ಮಹತ್ವದ ಸದ್‌ಗ್ರಂಥ. ಇದರ ಅಂಶಗಳನ್ನು ಅರಿತು ಆಚರಿಸಿದರೆ ಬದುಕು ಹಸನಾಗುತ್ತದೆ ಎಂದರು.

ಬೆAಗಳೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ, ಕಾರ್ಯಕ್ರಮದ ಪ್ರಾಯೋಜಕ ಪ್ರಭುಲಿಂಗಶಾಸ್ತಿç, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಎಚ್.ಎಸ್.ಪುಟ್ಟೇಗೌಡ ಮತ್ತಿತರರಿದ್ದರು.