ಹಾರುಗೊಪ್ಪದಲ್ಲಿ ಮಾತೋಶ್ರೀ ಶಿವಯೋಗಿನಿ ದೇವಿಗೆ ವಿವಿಧ ಪೂಜ್ಯರು ಸನ್ಮಾನಿಸಿದರು. ಹುಬ್ಬಳ್ಳಿ ಗೀತಾ ಮಾತೋಶ್ರೀ, ಕಲ್ಲೂರ ಲಲಿತಾ ಮಾತೋಶ್ರೀ, ಶಿರೋಳ ಅಕ್ಕಮಹಾದೇವಿ, ಮೊರಬ ಮೈತ್ರಾಮಾತೋಶ್ರೀ, ಅಡಹಳಟ್ಟಿ ಮಠದ ಶಿವಪಂಚಾಕ್ಷರಿ ಶ್ರೀಗಳು ಇದ್ದರು. 
ಜಿಲ್ಲೆ

ಪರೋಪಕಾರದಿಂದ ನೆಮ್ಮದಿ ಪ್ರಾಪ್ತಿ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ಅಡಹಳಟ್ಟಿ ಮಠದ ಶಿವಪಂಚಾಕ್ಷರಿ ಶ್ರೀ, ಶ್ರೀ ಚನ್ನವಷಭೇಂದ್ರ ಶಿವಯೋಗಿಗಳ ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ ಅವರಿಂದ ಜು.18ರಿಂದ ಸೆ.3ರವರೆಗೆ ಲೋಕ ಕಲ್ಯಾಣಕ್ಕಾಗಿ ಜರುಗಿದ ದೇವಿ ಆರಾಧನೆ ಮೌನ ಅನುಷ್ಠಾನ ಮಹಾಮಂಗಳ ಮುಕ್ತಾಯ ಮಂಗಳವಾರ ಜರುಗಿತು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಇಂಚಲದ ಡಾ.ಶಿವಾನಂದ ಭಾರತಿ ಶ್ರೀ ಮಾತನಾಡಿ, ಪರೋಪಕಾರಿ ಜೀವನದಿಂದ ಮನಸ್ಸಿಗೆ ನೆಮ್ಮದಿ ಲಭಿಸಿ, ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದರು.

ವಿವಿಧ ಪೂಜ್ಯರಿಂದ ಸನ್ಮಾನ ಸ್ವೀಕರಿಸಿದ ಮಾತೋಶ್ರೀ ಶಿವಯೋಗಿನಿ ದೇವಿ ಮಾತನಾಡಿ, ದೇವರು ನೀಡಿದ ಜನ್ಮ ಸಾರ್ಥಕಪಡಿಸಿಕೊಳ್ಳಲು ದಾನ, ಧರ್ಮ ಮಾಡಬೇಕು. ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.

ಅರಭಾಂವಿ ಸಿದ್ಧಲಿಂಗ ಶ್ರೀ, ಚಿಕ್ಕುಂಬಿ ನಾಗಲಿಂಗ ಶ್ರೀ, ಮಲ್ಲಾಪೂರ ಚಿದಾನಂದ ಶ್ರೀ, ಗದ್ದಿಕೇರಿ ಸಚ್ಚಿದಾನಂದ ಶ್ರೀ, ಅಡಹಳಹಟ್ಟಿ ಪಂಚಾಕ್ಷರಿ ಶ್ರೀ, ಸವಟಗಿ ಲಿಂಗಯ್ಯ ಶ್ರೀ, ಬಾಂವಿಹಾಳ ಚನ್ನಪ್ಪ ಶರಣರು, ಹುಬ್ಬಳ್ಳಿ ಗೀತಾ ಮಾತೋಶ್ರೀ, ಕಲ್ಲೂರ ಲಲಿತಾ ಮಾತೋಶ್ರೀ, ಶಿರೋಳ ಅಕ್ಕಮಹಾದೇವಿ, ಮೊರಬ ಮೈತ್ರಾ ಮಾತೋಶ್ರೀ, ಅಡಹಳಟ್ಟಿ ಮಠದ ಶಿವಪಂಚಾಕ್ಷರಿ ಶ್ರೀ, ಬಸವರಾಜ ಕೌಜಲಗಿ, ಡಾ.ಸುರೇಂದ್ರ ಕಲಘಟಗಿ, ಗೌಡಪ್ಪ ಪಾಟೀಲ, ಸಣ್ಣಪ್ಪ ದಾಸನಾಳ, ವೀರಭದ್ರ ಬೆಡಸೂರ, ವಿಠ್ಠಲ ಕಾಗಿ ಇತರರಿದ್ದರು.