ಅರಕಲಗೂಡು: ಸಮಾಜದಲ್ಲಿ ಅಸಹಾಯಕರಿಗೆ ಸಹಾಯ ಮಾಡುವ ಉಪಕಾರ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಮೊಗವಿರ್ ಹೇಳಿದರು.
ತಾಲೂಕಿನ ಬೈಚನಹಳ್ಳಿ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ಓಡನಹಳ್ಳಿ ಹಾಗೂ ಚಿಕ್ಕಗೋವನಹಳ್ಳಿ ಗ್ರಾಮದಲ್ಲಿ ಅಂಗವಿಕಲರಿಗೆ ಹಮ್ಮಿಕೊಂಡಿದ್ದ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗವಿಕಲತೆ ಕೀಳರಿಮೆ ಎಂದು ಭಾವಿಸದೆ ಅವರಿಗೆ ಕೈಲಾದ ಸಹಾಯ ಮಾಡುವುದು ಮುಖ್ಯ. ಸರ್ಕಾರದ ಜತೆಗೆ ಧರ್ಮಸ್ಥಳ ಸಂಸ್ಥೆ ಅಂಗವಿಕರಿಗೆ ನೆರವು ನೀಡುತ್ತಿದೆ ಎಂದರು.
ಅನಾರೋಗ್ಯದಿಂದ ಸ್ವಾಧೀನ ಕಳೆದುಕೊಂಡಿರುವ ಗ್ರಾಮದ ಸುರೇಶ್ ಹಾಗೂ ಪುಟ್ಟಲಕ್ಷ್ಮೀ ಅವರಿಗೆ ವ್ಹೀಲ್‌ಚೇರ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಧ್ರುವಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಹೇಮಾ, ಪುಟ್ಟಮ್ಮ ರಾಣಿ, ಸೇವಾ ಪ್ರತಿನಿಧಿಗಳು ಇದ್ದರು.