ಕಾರವಾರ: ಗೋವಾದಲ್ಲಿ ಓದುತ್ತಿರುವ ಕಾರವಾರದ 23 ವಿದ್ಯಾರ್ಥಿಗಳು ಈ ಬಾರಿ ಮಾಜಾಳಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೇ 23ರಿಂದ ಪರೀಕ್ಷೆ ಆರಂಭವಾಗಿದ್ದು, ಜೂನ್ 1ರಂದು ಮುಕ್ತಾಯವಾಗಲಿದೆ. ಶನಿವಾರ ಭೂಗೋಳ ಪರೀಕ್ಷೆ ನಡೆಯಿತು. ಮಾಜಾಳಿ ಯೂನಿಯನ್ ಹೈಸ್ಕೂಲ್ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತಾರಾಜ್ಯ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಗೋವಾ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಕಾರವಾರದಲ್ಲೇ ಪರೀಕ್ಷೆ ಮಾಡಲು ಅವಕಾಶ ನೀಡಿದೆ. ಗೋವಾದಿಂದಲೇ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.