ಜಿಲ್ಲೆ

ಪರೀಕ್ಷಾರ್ಥಿಗಳು 28ಕ್ಕೆ ಮುಂಚಿತವಾಗಿ ನಗರ ಪ್ರವೇಶಿಸಿ

ಚಿತ್ರದುರ್ಗ: ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್ (ಸಿಎಆರ್-ಡಿಎಆರ್) 3064 ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಯೂ ನಗರದ 25 ಪರೀಕ್ಷಾ ಕೇಂದ್ರಗಳಲ್ಲಿ ಜ. 28ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳು ಮುಂಚಿತವಾಗಿ ನಗರ ಪ್ರವೇಶಿಸಿ, ಸಮಯಕ್ಕೆ ಸರಿಯಾಗಿ ಹಾಜರಾಗಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶ ಕೂಡ ಅಂದೇ ನಡೆಯಲಿದ್ದು, ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಕಾರಣಕ್ಕೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪರೀಕ್ಷಾರ್ಥಿಗಳು ಮುಂಚಿತವಾಗಿ ಬರುವಂತೆ ಕೋರಿದೆ.