ಮುನವಳ್ಳಿ ಪಟ್ಟಣದಲ್ಲಿ ಮಳೆಗಾಳಿಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ವಿಶ್ವಾಸ ವೆದ್ಯ ಭೇಟಿ ನೀಡಿ ಪರಿಶೀಲಿದರು. ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ಡಿ.ಡಿ.ಟೋಪೋಜಿ, ಪಂಚು ಬಾರಕೇರ ಇತರರು ಇದ್ದರು. 
ಜಿಲ್ಲೆ

ಪರಿಹಾರದ ಭರವಸೆ ನೀಡಿದ ವೈದ್ಯ

ಮುನವಳ್ಳಿ: ಪಟ್ಟಣದಲ್ಲಿ ಮೇ 11ರಂದು ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದ ಹಾನಿಗೊಳಗಾದ ಮನೆಗಳು ಮತ್ತು ರೆತರ ಜಮೀನುಗಳಿಗೆ ಶಾಸಕ ವಿಶ್ವಾಸ ವೆದ್ಯ ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರದ ಜತೆಗೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭಾನುವಾರ ಭರವಸೆ ನೀಡಿದರು.

ಬಿರುಗಾಳಿಯಿಂದ ಬಿದ್ದಿರುವ ವಿದ್ಯುತ್​ ಕಂಬಗಳ ದುರಸ್ತಿ ಕೈಗೊಂಡು ಸುಗಮ ವಿದ್ಯುತ್​ ಪೂರೆಕಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಪುರಸಭೆ ಸದಸ್ಯ ಸಿ.ಬಿ.ಬಾಳಿ, ಎಪಿಎಂ.ಸಿ, ಅಧ್ಯ ಚಂದ್ರು ಜಂಬ್ರಿ, ಡಿ.ಡಿ.ಟೋಪೋಜಿ, ಪಂಚು ಬಾರಕೇರ ಇತರರು ಇದ್ದರು.