ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಕಾಡ್ಗಿಚ್ಚು, ನೆರೆ, ಪ್ರವಾಹ ಹಾಗೂ ವನ್ಯಮೃಗಗಳ ಹಾವಳಿಯಿಂದ ರೈತರು ಬೆಳೆದ ಶ್ರೀಗಂಧದ ಸಸಿ, ಮರ ದ್ವಂಸಗೊAಡರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಡಾ.ಸುಂದರ್ ಗೌಡ, ವಿಶುಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಪರಿಹಾರಕ್ಕೆ ಒತ್ತಾಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಳೂರು: ಕಾಡ್ಗಿಚ್ಚು, ನೆರೆ, ಪ್ರವಾಹ ಹಾಗೂ ವನ್ಯಮೃಗಗಳ ಹಾವಳಿಯಿಂದ ರೈತರು ಬೆಳೆದ ಶ್ರೀಗಂಧದ ಸಸಿ, ಮರ ದ್ವಂಸಗೊAಡರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಸಹಾಯಕರ ಮೂಲಕ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಕೆ.ಸುಂದರಗೌಡ, ತರೀಕೆರೆ ತಾಲೂಕಿನ ಶಿವಪುರ ಗ್ರಾಮದ ವಿಶುಕುಮಾರ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಲೆಬಾಳುವ ಶ್ರೀಗಂಧ, ಗಾಳಿಮರ, ಮಾವು, ತೆಂಗು, ನುಗ್ಗೆಯ ತೋಟಕ್ಕೆ ಕಾಡ್ಗಿಚ್ಚು ತಗುಲಿ ಮರ ಗಳು ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದರು.

ಕೆಲವೇ ವರ್ಷಗಳಲ್ಲಿ ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತನ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಈ ಕುರಿತಾಗಿ ಶೀಘ್ರವೇ ನ್ಯಾಯಯುತವಾದ ಪರಿಹಾರವನ್ನು ನೊಂದ ರೈತನಿಗೆ ನೀಡಬೇಕು. ಜೊತೆಗೆ ಈ ರೀತಿಯ ಘಟನೆಗಳು ರಾಜ್ಯದ ಯಾವ ಮೂಲೆಗಳಲ್ಲಿ ಸಂಭವಿಸಿದರೂ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಯಿಂದ ಎಲ್ಲೆಂದರಲ್ಲಿ ಬೆಂಕಿಯ ಅವಘಡಗಳು ಸಂಭವಿಸುತ್ತಿದೆ. ಹತ್ತಾರು ವರ್ಷ ಬೆಳೆಸಿದ ಶ್ರೀಗಂಧ, ತೇಗ, ಮಹಾಘನಿ, ಬೀಟೆ, ರಕ್ತಚಂದನ ವೃಕ್ಷಗಳು ಬೆಂಕಿಗೆ ಆಹುತಿಯಾಗಲಿವೆ. ಇದು ಕಷ್ಟಪಟ್ಟು ಬೆಳೆಸಿದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ರೈತ ಸಮುದಾಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ಹನಿ ನೀರಿಗೂ ತತ್ಪಾರವಿರುವ ಈ ವಿಷಮ ಸಮಯದಲ್ಲಿ ರೈತರ ಕಂಬನಿ ಒರೆಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಶ್ರೀಗಂಧ ಅರಣ್ಯ ಇಲಾಖೆಯಡಿಯಲ್ಲಿ ಇರುವುದರಿಂದ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬದಲಾವಣೆಗೂ ಉತ್ತರದಾಯಿತ್ವ ಅರಣ್ಯ ಇಲಾಖೆಯೇ ಆಗಿದೆ ಎಂದರು.

ಆದ್ದರಿAದ ಆಕಸ್ಮಿಕ ಬೆಂಕಿಗಾಹುತಿ ಅಥವಾ ಪ್ರವಾಹ ಪರಿಸ್ಥಿತಿ ಎದುರಾದರೆ ಪರಿಹಾರ ಕುರಿತಾಗಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಶ್ರೀಗಂಧ ಬೆಳೆಗಾರರ ಬವಣೆ ಪರಿಹರಿಸಲು ಕೋರುತ್ತೇವೆ. ಈ ಅಪರೂಪದ ಪ್ರಕರಣಗಳನ್ನು ಪರಿಹರಿಸಲು ಅವಕಾಶವಿದ್ದರೆ ಪರಿಹಾರ ಘೋಷಣೆ ಮಾಡಲು ಸಹ ಸಂಘವು ಒತ್ತಾಯಿಸುತ್ತದೆ ಎಂದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕ ವಿಶುಕುಮಾರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.