ಮೈಸೂರು: ಎಸ್ಟಿ ಸೇರಿರುವ ನಾಯಕ ಸಮಾಜದ ‘ಪರಿಹಾರ’ ಪರ್ಯಾಯ ಪದವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಆಗ್ರಹಿಸಿದೆ.
ಈ ಸಂಬಂಧ ಲೋಕೋಪಯೋಗಿ ಸತೀಶ್ ಜಾರಕಿಹೊಳಿ, ಸಮಾಜಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ಶಾಸಕ ಅನಿಲ್‌ಚಿಕ್ಕಮಾದು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇತ್ತೀಚಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ನಾಯಕ ಸಮಾಜದ ಪರ್ಯಾಯ ಪದ ಪರಿವಾರ ಎಸ್ಟಿಗೆ ಸೇರಿದೆ. ಆದಾಗ್ಯೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇನ್ನೂ ಉಳಿಸಿಕೊಳ್ಳಲಾಗಿದೆ. ಕೂಡಲೇ ಒಬಿಸಿ ಪಟ್ಟಿಯಿಂದ ಈ ಪದವನ್ನು ತೆಗೆಯಬೇಕು. ಪರಿವಾರ ವಿಚಾರವಾಗಿ ಹಿಂದೆ ದಾಖಲಾಗಿರುವ ಎಲ್ಲ ಹಂತದ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಬೇಕು. ಈ ಮೂಲಕ ಅರ್ಜಿ ಸಲ್ಲಿಸಿರುವ ಸಮುದಾಯದ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಕೋರಿದರು.
ಸಂಘಟನೆಯ ಅಧ್ಯಕ್ಷ ದೇವರಾಜ್ ಟಿ.ಕಾಟೂರು, ನಾಯಕ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಪಿ.ಜಗದೀಶಮೂರ್ತಿ ಕೆ.ಎ.ಎಸ್.ಅಧಿಕಾರಿ ಮಹದೇವನಾಯಕ, ನಾಯಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಇದ್ದರು