ಅಕಾಲಿಕ ಮಳೆಯಿಂದಾಗಿ ಹಾನಿಯಾಗಿದ್ದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಂತ್ರಸ್ತರು ಜಾಂಭವ ಯುವ ಸೇನಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಾಜು ಮಾದರ, ಪ್ರಕಾಶ ತಳವಾರ, ರಾಮವ್ವ ಕುರೋಶಿ, ಕಾಮಾಕ್ಷಿ ಭಾಜನವರ, ಸುರೇಶ ಮಲಕಿನಕೊಪ್ಪ ಇತರರಿದ್ದರು. 
ಜಿಲ್ಲೆ

ಪರಿಹಾರ ನೀಡಲು ಸಂತ್ರಸ್ತರ ಆಗ್ರಹ

ಬೆಳಗಾವಿ: ಅಕಾಲಿಕ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ, ಯರಗಟ್ಟಿ ತಾಲೂಕಿನ ದಾಸನಾಳ, ಅಕ್ಕಿಸಾಗರ, ಸವದತ್ತಿ ತಾಲೂಕಿನ ಜೀವಾಪುರದಲ್ಲಿ ಮನೆಗಳು ಬಿದ್ದಿವೆ. ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಂತ್ರಸ್ತರು ಜಾಂಭವ ಯುವ ಸೇನಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಕಾಲಿಕ ಮಳೆಯಿಂದ ಮನೆಗಳು ಬಿದ್ದಿದ್ದರಿಂದ ನಾವು ಬೀದಿಗೆ ಬಂದಿದ್ದೇವೆ. ಈ ಕುರಿತಂತೆ ಬುಡರಕಟ್ಟಿ ಗ್ರಾಮ ಲೆಕ್ಕಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ ಈ ಭಾಗದಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಮನವಿ ಸಲ್ಲಿಸಿದ್ದೇವು. ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಾಂಭವ ಯುವ ಸೇನೆಯ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ರಾಜು ಮಾದರ, ಪ್ರಕಾಶ ತಳವಾರ, ರಾಮವ್ವ ಕುರೋಶಿ, ಕಾಮಾಕ್ಷಿ ಭಾಜನವರ, ಸುರೇಶ ಮಲಕಿನಕೊಪ್ಪ, ರಾಯಪ್ಪ ಕೆಂಚಪ್ಪನವರ, ಕಲ್ಮೇಶ ಮಾದರ, ದುರ್ಗವ್ವ ಮಾದರ ಹಾಗೂ ರಾಮಪ್ಪ ಕೊಟಗಿ, ಬಸವ್ವ ಬೀರಕ್ಕನವರ, ಗಂಗಪ್ಪ ತಳವಾರ, ನಿಂಗವ್ವ ಬಂಡಿವಡ್ಡರ ಇತರರಿದ್ದರು.