ವಿಜಯವಾಣಿ ಸುದ್ದಿಜಾಲ ಗದಗ
ಗದಗ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಸದ್ಯಕ್ಕೆ ಪರಿಹಾರ ಸಿಕ್ಕಂತೆ ಕಾಣಿಸುತ್ತಿಲ್ಲ. ಒಂದು ಸೋರಿಕೆ ದುರಸ್ತಿ ಮಾಡಿದರೆ ಮತ್ತೊಂದು ಕಡೆಗೆ ಪೈಪ್ ಒಡೆದು ಸಾವಿರಾರು ಲೀಟರ್ ಪೋಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿಯೇ ಅವಳಿ ನಗರದ ಜನರು ನೀರಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳಪೆ ಕಾಮಗಾರಿಯಿಂದ ಕುಡಿಯುವ ನೀರನ ಪೈಪ್ ಪೈನ್ ಒಂದೇ ವಾರದಲ್ಲಿ ಮೂರು ಕಡೆಗೆ ಒಡೆದು ಹೋಗಿದೆ. ಪೈಪ್ ಲೈನ್ ಮಾರ್ಗದುದ್ದಕ್ಕೂ ಒಟ್ಟು 8 ಸೋರಿಕೆ ಪಾಯಿಂಟ್‍ಗಳಿವೆ. ಅಲ್ಲಿ ನಿತ್ಯ ಸಾವಿರಾರು ಲೀಟರ್ ನೀರು ಹಾಳಾಗಿ ಹೋಗುತ್ತಿದೆ. ಇದೀಗ ಮಂಗಳವಾರ ಮತ್ತೆ ಅಡವಿಸೋಮಾಪುರ ಬಳಿ ಪೈಪ್ ಒಡೆದು ಸಾವಿರಾರು ಲೀಟರ್ ಪೆÇೀಲಾಗಿದೆ. ಒಡೆದಿರುವ ಪೈಪ್ ದುರಸ್ತಿಗೊಳಿಸಿದರೆ ಮತ್ತೊಂದು ಕಡೆಗೆ ಒಡೆದಿರುತ್ತದೆ. ಇದು ಮುಗಿಯದ ರಗಳೆ ಎನಸಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಅವಳಿ ಜನರು ಒತ್ತಾಯಿಸುತ್ತಿದ್ದಾರೆ.
ನಿರ್ವಹಣೆ ಕೊರತೆಮುಂಡರಗಿ ತಾಲೂಕಿನ ಹಮ್ಮಿಗಿಯಿಂದ ಗದಗ ವರೆಗೆ ಪೈಪ್ ಲೈನ್ ಮೂಲಕ ನೀರು ತರಲಾಗಿದೆ. ಆದರೆ, ಪೈಪ್ ಲೈನ್ ಕಾಮಗಾರಿ ಸಂಪೂರ್ಣ ಕಳಪೆ ಆಗಿದ್ದರಿಂದ ಪೈಪ್‍ಗಳು ಒಡೆಯುವುದು ಸಾಮಾನ್ಯವಾಗಿದೆ. ಇಲ್ಲಿವರೆಗೆ ನಗರಸಭೆ ಮತ್ತು ಕೆಯುಐಡಿಎಫ್ ಸಿ ಇಲಾಖೆ ನೀರು ಸರಬರಾಜು ಮಾಡಲಾಗುತ್ತಿತ್ತು. ಹಮ್ಮಿಗಿಯಿಂದ ಗದಗ ಎ ಪಾಯಿಂಟ್ ವರೆಗೆ ಕೆಯುಐಡಿಎಫ್ ಸಿ ನೀರು ತಂದು ಕೊಡಬೇಕು. ಅಲ್ಲಿಂದ ಅವಳಿ ನಗರಕ್ಕೆ ನಗರಸಭೆ ನೀರು ಪೂರೈಸಬೇಕು. ಈ ಎರಡೂ ಇಲಾಖೆ ನಡುವೆ ಸಮನ್ವಯ ಕೊರತೆಯಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಉದ್ಭವಿಸಿತ್ತು. ನಿರ್ವಹಣೆ ಮಾಡುವಂತಹ ಗುತ್ತಿಗೆದಾರ ಕಂಪನಿ ಮೇಲೆ ಹಿಡಿತ ಇಲ್ಲದ್ದರಿಂದ ನೀರಿನ ವ್ಯವಸ್ಥೆ ಮತ್ತಷ್ಟು ಹಾಳಾಗಿದೆ.
ಟಂಡರ್ ಕರೆದು ಹೊಸ ಏಜೆನ್ಸಿ ಮೂಲಕ ನೀರು ಸರಬರಾಜು ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ನಗರಸಭೆಗೆ ಸೂಚನೆ ನೀಡಿದೆ. ಸದ್ಯ ನಗರಸಭೆ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದೆ. ದುರಸ್ತಿ ಪ್ರಕ್ರಿಯೆ ಕೂಡ ನಿಧಾನಗತಿಯಲ್ಲಿ ಸಾಗಿದ್ದರಿಂದ ನೀರು ಪೂರೈಕೆ ಅಸ್ತವ್ಯಸ್ತಗೊಂಡು ಅವಳಿ ನಗರದ ಜನರ ಗೋಳಾಡುವಂತಾಗಿದೆ.
ಗದಗ ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. 24*7 ಮಾದರಿಯ ನೀರ ಪೂರೈಕೆ ವ್ಯವಸ್ಥೆ ಇದಾಗಿದೆ. 15 ದಿನಕ್ಕೊಮ್ಮೆ ನೀರು ಸಹ ಪೂರೈಕೆ ಆಗುತ್ತಿಲ್ಲ. ನಗರದ ಕೆಲವಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೀರು ಪೂರೈಕೆ ನಿರ್ವಹಣೆ ಮಾಡುವಲ್ಲಿ ನಗರಸಭೆ ಮತ್ತು ಕೆಯುಐಡಿಎಫ್ ಸಿ ಸಂಪೂರ್ಣ ವೈಫಲ್ಯವಾಗಿವೆ.
ಚಂದ್ರಕಾಂತ ಚವ್ಹಾಣ, ಸಾಮಾಜಿಕ ಹೋರಾಟಗಾರ
ಅಡವಿಸೋಮಾಪೂರ ಬಳಿಯ ಸೋರಿಕೆ ಹೊಸದಲ್ಲ, ಕಳೆದ ಅನೇಕ ದಿನಗಳಿಂದ ಸೋರಿಕೆ ಇದೆ. ಹಂತ ಹಂತವಾಗಿ ಸೋರಿಕೆ ದುರಸ್ತಿ ಮಾಡಲಾಗುತ್ತಿದೆ. ಹಮ್ಮಿಗಿಯಿಂದ ಗದಗ ವರೆಗೆ ಇಂತಹ 8 ಸೋರಿಕೆ ಪಾಯಿಂಟ್ ಗಳಿವೆ. ಒಂದೊಂದಾಗಿ ದುರಸ್ತಿ ಮಾಡಿಕೊಂಡು ಬರಲಾಗುತ್ತಿದೆ. ನಗರಸಭೆ ವತಿಯಿಂದಲೇ ದುರಸ್ತಿ ಕಾರ್ಯ ನಡೆದಿದೆ.
ಸುಭಾಸ ಭಜಮ್ಮನವರ, ಎಇಇ, ಕೆಯುಐಡಿಎಫ್‍ಸಿ, ಗದಗ
ಗದಗ ಬೆಟಗೇರಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಗರಸಭೆಯಿಂದ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಪೈಪ್ ಲೈನ್ ಉದ್ದಕ್ಕೂ ಇರುವ ಸೋರಿಕೆಯನ್ನು ದುರಸ್ತಿ ಮಾಡಲಾಗುತ್ತಿದೆ. ಇದರಿಂದ ಅವಳಿ ನಗರದ ನೀರು ಪೂರೈಕೆಯಲ್ಲಿ ಕೊಂಚ ಅಸ್ತವ್ಯಸ್ತ ಆಗಬಹುದು. ಸಾರ್ವಜನಕರು ಸಹಕಾರ ನೀಡಬೇಕು. ತಿಂಗಳೊಳಗೆ ಸಮಸ್ಯೆಯನ್ನು ಇತ್ಯರ್ಥಪಡಿಸಿ ನೀರು ಪೂರೈಸಲಾಗುವುದು.
ರಮೇಶ ಸುಣಗಾರ, ಪೌರಾಯುಕ್ತ ಗದಗ ಬೆಟಗೇರಿ ನಗರಸಭೆ