ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಶಿಬಿರವನ್ನು ಶನಿವಾರ ತೊರೆನೂರು ಶಾಲಾವರಣದಲ್ಲಿ ಶ್ರೀ ಮಲ್ಲೇಶ ಸ್ವಾಮೀಜಿ ಉದ್ಘಾಟಿಸಿದರು. ಬಿ.ಎಂ.ಪ್ರವೀಣ್ಕುಮಾರ್, ಎಚ್.ವಿ. ಶಿವಪ್ಪ, ಕೆ.ವಿ.ಉಮೇಶ್, ರೂಪ ಎ.ಜಿ, ಕಾಮಾಕ್ಷಿ ಇತರರು ಇದ್ದರು. 
ಜಿಲ್ಲೆ

ಪರಿಸರಕ್ಕೆ ಪೂರಕ ಬದುಕು ಅಗತ್ಯ

ಕುಶಾಲನಗರ: ಜನರು ಪರಿಸರಕ್ಕೆ ಪೂರಕವಾಗಿ ಬದುಕಲು ಸಹಕಾರಿಯಾಗುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಮಾಡಬೇಕು ಎಂದು ತೊರೆನೂರು ವಿರಕ್ತ ಮಠದ ಮಠಾಧಿಪತಿ ಶ್ರೀ ಮಲ್ಲೇಶ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಶನಿವಾರ ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಎಸ್‌ಎಸ್‌ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಯುವಶಕ್ತಿಯಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ. ಸಾಧ್ಯತೆಯ ಮೊದಲ ಹೆಜ್ಜೆಯನ್ನು ಇಂತಹ ಶಿಬಿರಗಳ ಮೂಲಕ ಇಡಬೇಕು ಎಂದರು.
ಪ್ರಾಂಶುಪಾಲ ಬಿ.ಎಂ.ಪ್ರವೀಣ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಉಪಾಧ್ಯಕ್ಷ ಎಂ.ಬಿ.ಬೇಬಿ, ತಾಲೂಕು ಕಸಾಪ ಖಜಾಂಚಿ ಉಮೇಶ್, ಶಿಬಿರಾಧಿಕಾರಿ ಡಾ.ಎಸ್.ಸುನೀಲ್ಕುಮಾರ್ ಮಾತನಾಡಿದರು. ಎನ್‌ಎಸ್‌ಎಸ್ ಸಮಿತಿ ಸದಸ್ಯ ಡಾ.ಬಿ.ಡಿ. ಹರ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಾಮಾಕ್ಷಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ಎನ್. ದಿನೇಶ್, ಉಪಾಧ್ಯಕ್ಷೆ ಅನಿತಾ.ಎನ್.ಬಿ ಇತರರು ಹಾಜರಿದ್ದರು.