ಜಿಲ್ಲೆ

ಪರಿಸರ ಸರಿಯಿದ್ದರೆ ಬದುಕು ಸುಂದರ

Dharwad

ಧಾರವಾಡ: ಜೀವ ಜಗತ್ತಿನ ಪರಿಸರದಲ್ಲಿ ಎಲ್ಲವೂ ಸರಿಯಾಗಿದ್ದರೆ ಬದುಕು ಸುಂದರವಾಗಿರುತ್ತದೆ. ಎಲ್ಲವೂ ಅಳಿದ ಮೇಲೆ ಪರಿತಪಿಸುವುದಕ್ಕಿಂತ ಮುನ್ನೆಚ್ಚರಿಕೆ ಅಗತ್ಯ. ಪರಿಸರ ಎಂಬ ಭೂತಾಯಿ ರಕ್ಷಣೆ ಎಲ್ಲರ ಕರ್ತವ್ಯ ಎಂದು ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಸಾಯಿಕುಮಾರ ಹಿಳ್ಳಿ ಅಭಿಪ್ರಾಯ ಪಟ್ಟರು.

ರಮಾತಾಯಿ ಭೀಮರಾವ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಗಣಕರಂಗ ಮತ್ತು ಹಾವೇರಿಯ ಕಲಾಸ್ಪಂದನ ಸಂಸ್ಥೆ ಆಶ್ರಯದಲ್ಲಿ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಯಿ ಕವಿಗೋಷ್ಠಿ ಹಾಗೂ ಗಾಯಕ ಪ್ರೇಮಾನಂದ ಶಿಂಧೆ ಅವರ ‘ಅಳಿದ ಮೇಲೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮಾತನಾಡಿ, ಯುವ ಸಮುದಾಯ ಕಲೆ, ಸಾಹಿತ್ಯಿಕ ಕಾರ್ಯದಲ್ಲಿ ತೊಡಗುವಂತೆ ಹಿರಿಯರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಸರಸ್ವತಿ ಭೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ಸಿದ್ದರಾಮ ಹಿಪ್ಪರಗಿ ಮಾತನಾಡಿದರು. ರಮೇಶ ಪರವಿನಾಯ್ಕರ್, ಕ್ರೀಡಾಪಟು ಸುರೇಶ ಬೆಟಗೇರಿ, ಉತ್ತಮ ಅಧಿಕಾರಿ ಪ್ರಶಸ್ತಿ ಪುರಸ್ಕೃತ ಸಾಯಿಕುಮಾರ ಹಿಳ್ಳಿ, ಪ್ರೇಮಾನಂದ ಶಿಂಧೆ ಅವರನ್ನು ಸನ್ಮಾನಿಸಲಾಯಿತು.

ಲಕ್ಷ್ಮಣ ಬಕ್ಕಾಯಿ, ಪ್ರಕಾಶ ಉಡಿಕೇರಿ, ಕೆ.ಎಸ್.ರಾಮದುರ್ಗ, ಡಾ. ಕೃಷ್ಣ ರಾಠೋಡ, ಎಸ್.ಎಂ. ಕರಡಿಗುಡ್ಡ, ನಿತಿನ್ ಗುಡಿಮನಿ, ಡಾ. ಅನ್ನಪೂರ್ಣ ತಳಕಲ್ಲ, ಪವನ್ ಆದಿ, ಎಂ.ಬಿ. ಶೇಖ್, ಎ.ಎಸ್. ಮಕಾನದಾರ, ಪ್ರಕಾಶ ಕಡಮೆ, ಅಶೊಕ ಹೊನಕೇರಿ, ಯಲ್ಲವ್ವ ಕೊಡಬಾಳ, ಗಂಗಮ್ಮ ಭಂಡಾರಿ, ಸಿದ್ದಾರೂಢ ನಾವಿ, ಪರಶುರಾಮ ಬಗಲಿ, ಗುರಣ್ಣ ಶಿಂಧೆ, ಬಸವರಾಜ ತಳವಾರ, ಅಜಯಕುಮಾರ ಕಾಂಬ್ಳೆ, ಇತರರು ಇದ್ದರು. ಮಾರ್ತಾಡಪ್ಪ ಕತ್ತಿ ನಿರೂಪಿಸಿದರು.