ಜಿಲ್ಲೆ

ಪರಿಸರ ಸಂರಕ್ಷಣೆಗೆ ಮುಂದಾಗಲಿ -ರಾಘವೇಂದ್ರ ಬಿ.ಎಸ್.

ಬೆಳಗಾವಿ: ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಮುಖ್ಯಸ್ಥ ರಾಘವೇಂದ್ರ ಬಿ.ಎಸ್.ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಆಯುಷ್ ಕಚೇರಿ ಮತ್ತು ಆಸ್ಪತ್ರೆ ಆವರಣದಲ್ಲಿ ಈಚೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು.

ಸಸಿಗಳ ನೆಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಸ್ಥಾಪಕ ಸದಸ್ಯವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್ ರಿನ್ಯೂಎಬಲ್ ಎನರ್ಜಿ ಕ್ಷೇತ್ರಕ್ಕೆ 28,742 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದೆ.\

ಯೂನಿಯನ್ ಗ್ರೀನ್ ಮೈಲ್ಸ್ ಅಂದರೆ ಇಲೆಕ್ಟ್ರಿಕ್ ವೆಹಿಕಲ್ಸ್ ಅಡಿಯಲ್ಲಿ 779 ಕೋಟಿ ರೂ. ಮಂಜೂರು ಮಾಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದು ಪಾಟರ್ನಶಿಪ್ ಫಾರ್ ಕಾರ್ಬನ್ ಅಕೌಂಟಿಂಗ್ ಫೈನಾನ್ಶಿಯಲ್ಸ್ (ಪಿಸಿಎಎಫ್) ಪಾಲುದಾರಿಕೆಗೆ ಸಹಿ ಹಾಕಿದ ದೇಶದ ಮೊದಲ ಪ್ರಮುಖ ಬ್ಯಾಂಕ್ ಎಂದು ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣದೋಳಿ, ಉಪ ಪ್ರಾದೇಶಿಕ ಮುಖ್ಯಸ್ಥ ಮನೀಶ್ ಮೇಘಣ್ಣವರ, ಆನಂದ ಕಾಂಬಳೆ, ವೇದ ಪ್ರಕಾಶ ಇತರರಿದ್ದರು.