ಜಿಲ್ಲೆ

ಪರಿಸರ ಸಂರಕ್ಷಣೆಗಾಗಿ ಪಣ ತೊಡಿ

Yadgir

ಯಾದಗಿರಿ: ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಪಣ ತೊಡುವ ಅವಶ್ಯಕತೆ ಇದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ತಾಲೂಕಿನ ಬೆಳಗೇರಾ ಗ್ರಾಮದಲ್ಲಿ ಮಹಿಳಾ ಮೊರ್ಚಾ, ಯುವ ಮೊರ್ಚಾ ಹಾಗೂ ಗ್ರಾಮ ವಿಕಾಸ ಸಂಘದಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆ, ಆಸ್ಪತ್ರೆ ಆವರಣ, ಅಂಗನವಾಡಿ ಶಾಲೆ ಬಳಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದರ ಜತೆಗೆ ಪ್ರತಿಯೊಬ್ಬ ಕಾರ್ಯಕರ್ತರು ಅವುಗಳ ಪಾಲನೆ ಪೊಷಣೆಯ ಜವಾಬ್ದಾರಿ ಹೊರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಸಂಘ,ಸಂಸ್ಥೆಗಳು ಮತ್ತು ಜಿಲ್ಲೆಯ ಜನತೆ ಕೈಜೋಡಿಸಬೇಕು. ಅಂತರ್ಜಲ ವೃದ್ಧಿಸಲು ಅನುಸರಿಸಬೇಕಾದ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂಥ ಒಂದೆರಡು ಕಾರ್ಯಕ್ರಮಗಳ ಮೂಲಕ ಜಿಲ್ಲೆಯನ್ನು ಹಸಿರುಗೊಳಿಸಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಪ್ರಗತಿಪರ ರೈತ ದುರ್ಗಪ್ಪ ಬಸನಾಯಕ ಅವರನ್ನು ಸನ್ಮಾನಿಸಲಾಯಿತು.

ಯುವ ಮೊರ್ಚಾ ಜಿಲ್ಲಾಧ್ಯಕ್ಷ ಮೌನೇಶ ಬೆಳಗೇರಾ, ನಾಗರಾಜ, ಗ್ರಾಮ ವಿಕಾಸ ಜಿಲ್ಲಾ ಸಂಯೋಜಕ ಹೊನ್ನೇಶ ಪೂಜಾರಿ, ಸಂಜೀವ ವಾಡೇಕರ್, ಸುನಿತಾ ಚವ್ಹಾಣ, ಶಕುಂತಲಮ್ಮ, ರಾಜು ಸೈದಾಪೂರ, ಲಕ್ಷ್ಮಣ ಕಂದಾರ, ಸಾಬಣ್ಣ ಮಡಿವಾಳ, ಶಂಕರ, ವೆಂಕಟೇಶ ತೋರಪನೋರ, ವೆಂಕಟೇಶ, ಅಶೋಕ ಮಾಸ್ತರ್, ಸಾಬಣ್ಣ ಪ್ಯಾಟಿ, ಕಾಶಪ್ಪ ಇದ್ದರು.