ಚಾಮರಾಜನಗರ: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾದ ಪರಿಸರ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪರಿಸರ ಪ್ರೇಮಿ ಸುಂದರ್ ಅರಸ್ ಸಲಹೆರ ನೀಡಿದರು.
ತಾಲೂಕಿನ ನಾಗವಳ್ಳಿ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ಗಿಡಗಳನ್ನು ನೆಟ್ಟು ಇತರರಿಗೆ ಪರಿಸರದ ಮಹತ್ವವನ್ನು ತಿಳಿಸಬೇಕು. ಸುಂದರವಾದ ಪರಿಸರವಿದ್ದರೆ ನಾವೆಲ್ಲರೂ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಾಗವಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿವಿನ ಕುರಿತು ಜಾಗೃತಿ ಮೂಡಿಸುವ ಘೋಷಣೆಯನ್ನು ಕೂಗಿ ಶಾಲಾ ಮಕ್ಕಳಿಂದ ಜಾಥಾ ನಡೆಯಿತು. ಉಚಿತವಾಗಿ ಪಾಲಕರಿಗೆ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪುಟ್ಟನಂಜಮ್ಮ, ಎಸ್ಡಿಎಂಸಿ ಸದಸ್ಯರಾದ ಶೋಭಾ, ಮಹೇಶ್, ಮುಖ್ಯ ಶಿಕ್ಷಕಿ ಎಂ.ಶಾಂತಿ, ಸಹ ಶಿಕ್ಷಕಿ ಎಸ್.ಗೀತಾ, ರಾಜೇಶ್ವರಿ, ಡಿ.ಲೀಲಾವತಿ, ರೇಣುಕಾ, ಸೆಲೆತ್ ಸುಚಿತ್ರ ಕುಮಾರಿ, ಪರಿಸರ ಪ್ರೇಮಿಗಳಾದ ಸಿದ್ದರಾಜು, ಮಹೇಶ್ ಹಾಗೂ ಇತರರು ಹಾಜರಿದ್ದರು.