ಜಿಲ್ಲೆ

ಪರಿಸರ ಸಂರಕ್ಷಣೆ ಎಲ್ಲರ ಧ್ಯೇಯವಾಗಲಿ


ಯಾದಗಿರಿ: ಪ್ರತಿಯೊಬ್ಬ ವಿದ್ಯಾಥರ್ಿಗಳು ಕನಿಷ್ಠ ತಲಾ ಒಂದೊಂದರಂತೆ ಸಸಿಯನ್ನು ನೆಟ್ಟು, ಸಂರಕ್ಷಿಸುವುದರ ಮೂಲಕ ಪರಿಸರ ಕಾಪಾಡುವಂತೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಕಿವಿಮಾತು ಹೇಳಿದರು.

ಭಾನುವಾರ ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಕಾಡು ಬೆಳೆಸಿ, ನಾಡು ಉಳಿಸಬೇಕಾಗಿದೆ. ಕಾಡನ್ನು ನಾಶ ಪಡಿಸುತ್ತಿರುವುದರಿಂದ ಮಳೆ ಬರುತ್ತಿಲ್ಲ. ಸಕಾಲಕ್ಕೆ ಮಳೆಯಾಗದೆ ಬಿತ್ತಿದ ಬೆಳೆಯು ಬತ್ತಿ ಹೋಗಿ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಅದಕ್ಕಾಗಿ ಪರಿಸರ ಜಾಗೃತಿ ಮೂಡಿಸಲು ಎಲ್ಲರೂ ಸಸಿಯನ್ನು ನೆಟ್ಟು ಬೆಳೆಸಿ, ಪೋಸಬೇಕೆಂದು ಕರೆ ನೀಡಿದರು.

ಪ್ರಾದೇಶಿಕ ಉಪ ಸಂರಕ್ಷಣಾಕಾರಿ ಕಾಜೋಲ್ ಪಾಟಿಲ್, ಅರಣ್ಯ ಇಲಾಖೆಯು ಶಾಲಾ-ಕಾಲೇಜುಗಳ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಅಭಿಯಾನವನ್ನು ಮಾಡುತ್ತಿದ್ದು. ಅದಕ್ಕೆ ವಿದ್ಯಾಥರ್ಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಅದು ಯಶಸ್ವಿಯಾಗಲು ಸಾಧ್ಯವಾಗುತ್ತದೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ವಿದ್ಯಾಥರ್ಿಗಳು ಈ ದಿಶೆಯಲ್ಲಿ ತಮ್ಮ ಕಾಳಜಿಯನ್ನು ತೋರಲು ಪ್ರತಿಯೊಬ್ಬರು ಗಿಡ ನೆಡಬೇಕೆಂದು ತಿಳುವಳಿಕೆ ಮೂಡಿಸಬೇಕಾದ ಅಗತ್ಯವಿದೆಯೆಂದು ಹೇಳಿದರು.

ಸಿಂಡಿಕೇಟ್ ಮಾಜಿ ಸದಸ್ಯ ರಘುನಾಥರೆಡ್ಡಿ ಪಾಟೀಲ, ಬಾಬುರಾವ್ ಗುತ್ತೇದಾರ, ಮಲ್ಲಿಕಾಜರ್ುನ ಈಟೆ, ಅರಣ್ಯ ಇಲಾಖೆಯ ಅಕಾರಿಗಳಾದ ಜಯವರ್ಧನ ತಳವಾರ, ಮಹ್ಮದ್ ಅಸದ್, ಪ್ರಹ್ಲಾದ ಜೋಶಿ, ಮಂಜುನಾಥ, ಅಧ್ಯಾಪಕರುಗಳಾದ ಡಾ. ಮೋನಯ್ಯ ಕಲಾಲ, ಡಾ. ದೇವೀಂದ್ರಪ್ಪ ಹಳಿಮನಿ, ಡಾ.ರಾಘವೇಂದ್ರ ಬಂಡಿಮನಿ, ಮಂಜುನಾಥ,ಸಾಬರೆಡ್ಡಿ, ರಾಜಶೇಖರ, ಹರೀಶ್ ಇದ್ದರು.