ಜಿಲ್ಲೆ

ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ : ಪರಿಸರ ದಿನಾಚರನೆಯಲ್ಲಿ ಬಿಜಿಎಸ್​ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್​.ಶಿವರಾಮರೆಡ್ಡಿ ಅಭಿಪ್ರಾಯ

ಚಿಕ್ಕಬಳ್ಳಾಪುರ: ತಾಲೂಕಿನ ಅಗಲರ್ಗುಕಿಯ ಬಿಜಿಎಸ್​ ಇಂಗ್ಲಿಷ್​ ಶಾಲೆಯಲ್ಲಿ ಸೋಮವಾರ ವೃಕ್ಷವಂದನೆಯ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ವಿದ್ಯಾಥಿರ್ಗಳು ಮನೆಗಳಿಂದ ನೂರಾರು ಗಿಡಗಳನ್ನು ತಂದು, ಪರಸ್ಪರ ವಿನಿಮಯ ಮಾಡಿಕೊಂಡರು. ಪರಿಸರದ ಮಹತ್ವವನ್ನು ಸಾರುವ ಸಂದೇಶಗಳ ಭಿತ್ತಿ ಫಲಕಗಳನ್ನು ಪ್ರದಶಿರ್ಸಿ, ಮೆರವಣಿಗೆ ನಡೆಸಿದರು. ಇದೇ ವೇಳೆ ನರ್ಸರಿಯಿಂದ 10ನೇ ತರಗತಿಯವರೆಗಿನ ವಿದ್ಯಾಥಿರ್ಗಳು ಶಾಲಾ ಅವರಣದಲ್ಲಿರುವ ಬೇವಿನಮರ, ಹಲಸಿನಮರ ಮತ್ತು ಮಾವಿನ ಮರಗಳಿಗೆ ಪೂಜಿಸಿ ವಂದಿಸಿದರು. ಪಾಕೆಟ್​ಗಳಲ್ಲಿ ಮಣ್ಣನ್ನು ತುಂಬಿ ಹೊಂಗೆ, ಹುಣಿಸೆ, ಸಿಲ್ವರ್​ ಓಕ್​, ಆಲದಮರ, ಬೇವು ಸೇರಿ ನಾನಾ ಸಸಿ ಬೀಜಗಳನ್ನು ಬಿತ್ತಿದರು.

ಬಿಜಿಎಸ್​ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್​.ಶಿವರಾಮರೆಡ್ಡಿ ಮಾತನಾಡಿ, ಪರಿಸರವನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಮೊದಲಿನಿಂದಲೂ ಗಿಡ, ಮರಗಳನ್ನು ಪೂಜನೀಯ ಸ್ಥಾನದಲ್ಲಿ ಪೂಜಿಸುವ ಸಂಪ್ರದಾಯ ಇದೆ ಎಂದರು.

ವಲಯ ಅರಣ್ಯಾಧಿಕಾರಿ ದೇವರಾಜ್​ ಮಾತನಾಡಿ, ಪರಿಸರವನ್ನು ಉಳಿಸಿ ಬೆಳೆಸುವಿಕೆಯು ಪ್ರತಿಯೊಬ್ಬರ ಜವಾಬ್ದಾರಿ. ಇದನ್ನರಿತು ಹಸಿರು ಸಂಪತ್ತು ವೃದ್ಧಿಗೆ ಅರಣ್ಯ ಇಲಾಖೆಯೊಂದಿಗೆ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಶಾಲೆಯ ಪ್ರಾಂಶುಪಾಲ ಡಿ.ಸಿ ಮೋಹನ್​ ಕುಮಾರ್​ ಮಾತನಾಡಿ, ಪ್ರತಿಯೊಬ್ಬರೂ ಪ್ರತಿ ವರ್ಷದ ಹುಟ್ಟು ಹಬ್ಬವನ್ನು ಒಂದೊಂದು ಗಿಡ ನೆಡುವ ಮೂಲಕ ಅರ್ಥರ್ಪೂಣವಾಗಿ ಆಚರಿಸಿಕೊಳ್ಳಬೇಕು ಎಂದರು.

ಬಿಜಿಎಸ್​ ಶಿಕ್ಷಣ ಸಲಹೆಗಾರ ಎಸ್​.ವೆಂಕಟೇಶಪ್ಪ ಮತ್ತಿತರರು ಇದ್ದರು.

ಪುನೀತ್​ ರಾಜ್​ ಕುಮಾರ್​ ಸ್ಮರಣೆ: ಜಿಲ್ಲೆಯ ವಿವಿಧೆಡೆ ನಟ ಪುನೀತ್​ ರಾಜಕುಮಾರ್​ ಹೆಸರಿನಲ್ಲಿ ತೆಂಗಿನ ಸಸಿಗಳನ್ನು ನೆಡುವ ಮೂಲಕ ಉಸಿರಿಗಾಗಿ ಹಸಿರು ಟ್ರಸ್ಟ್​ ವಿಶ್ವ ಪರಿಸರ ದಿನವನ್ನು ಆಚರಿಸಿತು. ಜಿಲ್ಲೆಯ 12 ವಸತಿ ಶಾಲೆಗಳ ಆವರಣಗಳಲ್ಲಿ ತಲಾ 50 ತೆಂಗಿನ ಸಸಿಗಳನ್ನು ನೆಡಲಾಯಿತು.

ಉಸಿರಿಗಾಗಿ ಹಸಿರು ಟ್ರಸ್ಟಿನ ಕಾರ್ಯಕಾರಿ ಟ್ರಸ್ಟಿ ಎನ್​.ಗಂಗಾಧರ ರೆಡ್ಡಿ ಮಾತನಾಡಿ, ಆರೋಗ್ಯಕರ ಪರಿಸರ ಸಮಾಜ ನಿರ್ಮಾಣದ ಗುರಿಯೊಂದಿಗೆ ಕಳೆದೆರಡು ವರ್ಷಗಳಿಂದಲೂ ಸಂಸ್ಥೆಯು ವಸತಿ ಶಾಲೆಗಳಲ್ಲಿ ಹಸಿರು ಯ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ. ಜನರ ಜೀವನ ಶೈಲಿಯೂ ಪರಿಸರಕ್ಕೆ ಪೂರಕವಾಗಿರಬೇಕು. ಮಾರಕ ಪ್ಲಾಸ್ಟಿಕ್​ ಬಳಕೆ ನಿಯಂತ್ರಿಸಬೇಕು ಎಂದರು.

ಸದಸ್ಯ ರಮೇಶ್​ ಮಾತನಾಡಿ, ಪರಿಸರ ದಿನಾಚರಣೆಗೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳನ್ನು ಹಂಚಿಕೊಳ್ಳುವ ಚಾಳಿ ಯುವಜನರಲ್ಲಿ ಅಧಿಕವಾಗುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು. ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಲ್ಮನರಸಿಂಹಗೌಡ ಮತ್ತಿತರರು ಇದ್ದರು.

ಹಸಿರು ಸ್ವಯಂ ಸೇವಾ ಸಂಸ್ಥೆ: ಹಸಿರು ಸ್ವಯಂಸೇವಾ ಸಂಸ್ಥೆ ವತಿಯಿಂದ ತಾಲೂಕಿನ ಕೊಳವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ತಹಸೀಲ್ದಾರ್​ ಗಣಪತಿ ಶಾಸಿ, ದೊಡ್ಡ ಮರಳಿ ಗ್ರಾಪಂ ಪಿಡಿಒ ಭವಾನಿ, ಸದಸ್ಯರಾದ ಅರುಣ ಕುಮಾರಿ, ಸಿಆರ್​ಪಿ ನಾರಾಯಣಸ್ವಾಮಿ, ಸಂಸ್ಥೆಯ ಅಧ್ಯಕ್ಷ ಮಧು, ಶಿಕ್ಷಕ ಮಹಾಂತೇಶ್​ ಮತ್ತಿತರರು ಇದ್ದರು.