ಚಿತ್ರದುರ್ಗ: ಪರಿಸರ ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಸಿಡಿಸುವಂತೆ ವ ಕೀಲ ಬಸವರಾಜ್ ನಾಗರಿಕರಿಗೆ ಮನವಿ ಮಾಡಿದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಪ್ರಮುಖರು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ ಟಾಕಿ ಸಿಡಿಸಿ ಮಕ್ಕಳು ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಸುಟ್ಟ ಗಾಯಗಳಿಗೆ ಒಳಗಾಗುತ್ತಿದ್ದಾರೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಪರಿಸರ ಹಾಳಾಗುತ್ತಿದ್ದು, ಹವಾಮಾನ ವೈಪರೀತ್ಯ ತಡೆಗಾಗಿ ಪಟಾಕಿ ಮಾರಾಟ ನಿಷೇಧಿಸಬೇಕೆಂದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಟಿ.ನವೀನ್‌ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ರಾಜ್ಯಾ ದ್ಯಂತ ಪ್ರವಾಸ ಮಾಡಲಾಗುತ್ತಿದೆ. ಹಬ್ಬದಲ್ಲಿ ಹಸಿರು ಪಟಾಕಿ ಬಳಸಿ ಪರಿಸರವನ್ನು ಕಾಪಾಡಬೇಕಿದೆ ಎಂದರು.
ವಕೀಲ ಮಾಲತೇಶ ಅರಸ್ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ, ಪವನಯಂತ್ರ, ಮರಳು ಮಾಫಿಯಾಕ್ಕೆ ಕಡಿವಾಣ ಇಲ್ಲವಾಗುತ್ತಿರುವುದೂ ಪರಿಸರ ಹಾನಿಗೆ ಕಾರಣವಾಗುತ್ತಿದೆ. ಪರಿಸರ ಸಂರಕ್ಷಿಸುವಂತೆ ಒತ್ತಾಯಿಸಿ ಈಚೆಗೆ ಅರಣ್ಯ ಸಚಿವ ಈಶ್ವರಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ವೇದಿಕೆ ಸಂಚಾಲಕ ಟಿ.ರುದ್ರಮುನಿ ಮಾತನಾಡಿ, ವಾಯು, ಶಬ್ಧ ಮಾಲಿನ್ಯದಿಂದ ಹೊಸದಿಲ್ಲಿ ಜನ ತತ್ತರಿಸುವುದನ್ನು ಉದಾಹರಿಸಿದ ರು. ಬೆಳಕಿನ ಹಬ್ಬ ದೀಪಾವಳಿ ಪರಿಸರ ಸ್ನೇಹಿಯಾಗಿರಲಿ ಎಂದರು. ವೇದಿಕೆ ಸಂಘಟನಾ ಕಾರ‌್ಯದರ್ಶಿ ಎಂ.ವೇದಮೂರ್ತಿ, ಸ್ನೇಕ್ ಚೇತನ್ ಇದ್ದರು. ವೇದಿಕೆ ಉಪಾಧ್ಯಕ್ಷ ಡಾ.ಎಂ.ಸಿ.ನರಹರಿ, ಅಜೇಯ್, ಮಧು ಇದ್ದರು.