ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆಗೆ ದುಂದು ವೆಚ್ಚ ಅಗತ್ಯವಿಲ್ಲ, ಪ್ರಾಮಾಣಿಕ ಮನಸ್ಸು, ಸಂಕಲ್ಪ ಮುಖ್ಯವಾಗಿ ಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ ಗುರುವಾರ ಹಮ್ಮಿಕೊಂಡಿದ್ದ ಪರಿಸರಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳ ಮಾದರಿಯಲ್ಲಿ ಮನೆ, ಕಚೇರಿ ಆವರಣದಲ್ಲೂ ಗಿಡಮರಗಳನ್ನು ಬೆಳೆಸಿ, ಉತ್ತಮ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಬೇಕು. ಹೊಸದಾಗಿ ಸಸಿಗಳನ್ನು ನೆಡುವುದರ ಜತೆಗೆ ಹಳೇ ಗಿಡಮರಗಳನ್ನು ಉಳಿಸಿಕೊಳ್ಳುವುದರ ಜತೆಗೆ ನೈರ್ಮಲ್ಯ ಕಾಪಾಡಬೇಕು. ಈ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ದೇಶದ ರಾಜಧಾನಿ ನವದೆಹಲಿ ಮಾಲಿನ್ಯಕಾರಕ ನಗರವಾಗಿ ಪರಿವರ್ತನೆಯಾಗಿದ್ದು ಶುದ್ಧ ಗಾಳಿಗೆ ಪರಿತಪಿಸುವಂತಾಗಿದೆ. ಇಂತಹ ಪರಿಸ್ಥಿತಿ ಇತರೆಡೆಯೂ ಆಗದಂತೆ ಈಗಲೇ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿಜ್ಞಾನ ಪರಿಷತ್ ಅಧ್ಯಕ್ಷ ಕೆ.ಎಂ.ರವಿಕುಮಾರ್ ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಬಿ.ೌಜೀಯಾ ತರನ್ನುಮ್, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಆರ್.ರೇಖಾ, ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ವಿಜಯಲಕ್ಷ್ಮೀ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಇತರರಿದ್ದರು.
ಪರಿಸರ ಮಿತ್ರ ಪ್ರಶಸ್ತಿ ವಿತರಣೆ : ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ತನ್ನದಾಗಿಸಿಕೊಂಡಿತು. 30 ಸಾವಿರ ರೂ.ಗಳೊಂದಿಗೆ ಪಾರಿತೋಷಕ ನೀಡಲಾಯಿತು.ಕಿರುಹೊತ್ತಿಗೆ ಬಿಡುಗಡೆ : ಪರಿಸರ ಸಂರಕ್ಷಣೆ, ಶಾಲಾ ಆವರಣದಲ್ಲಿ ಹಸಿರು ವಾತಾವರಣ ಸೇರಿ ಹಲವು ಮಾಹಿತಿಯನ್ನೊಳಗೊಂಡ ಕನಸು ನನಸು ಕಿರುಹೊತ್ತಿಗೆಯನ್ನು ಜಿಪಂ ಸಿಇಒ ಬಿ.ೌಜೀಯಾ ತರನ್ನುಮ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕರು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.
ಹಸಿರು ಶಾಲೆ: * ಚಿಕ್ಕಬಳ್ಳಾಪುರ ತಾಲೂಕಿನ ದೇವಸ್ಥಾನಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಲ್ಲಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮತ್ತು ಅಂಕಣಗೊಂದಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, * ಬಾಗೇಪಲ್ಲಿಯ ಪೋಲೇರಮ್ಮ ಪ್ರೌಢಶಾಲೆ (ಜೂಲಪಾಳ್ಯ), ಸರ್ಕಾರಿ ಪ್ರೌಢಶಾಲೆ (ಸೋಮನಾಥಪುರ), * ಚಿಂತಾಮಣಿಯ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಕೈವಾರ), ಗೌರಿಬಿದನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ(ಪೈಪಲ್ಲಿ), ಸರ್ಕಾರಿ ಪ್ರೌಢಶಾಲೆ(ಗೆದರೆ), * ಶಿಡ್ಲಘಟ್ಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ದೊಡ್ಡದಾಸೇನಹಳ್ಳಿ), *ಗುಡಿಬಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ(ಲಗುಮೇನಹಳ್ಳಿ) ತಲಾ 5 ಸಾವಿರ ರೂಗಳೊಂದಿಗೆ ಹಸಿರು ಶಾಲೆ ಪ್ರಶಸ್ತಿ ಪಡೆದಿವೆ.
ಹಳದಿ ಶಾಲೆ: * ಚಿಂತಾಮಣಿಯ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಮರಬಹಳ್ಳಿ), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ(ಗೋನೇಹಳ್ಳಿ), * ಚಿಕ್ಕಬಳ್ಳಾಪುರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಬೀಡಿಗಾನಹಳ್ಳಿ), ಸರ್ಕಾರಿ ಪ್ರೌಢಶಾಲೆ(ಅಡ್ಡಗಲ್ಲು), ಪಂಚಗಿರಿ ಬೋಧನಾ ಪ್ರೌಢಶಾಲೆ (ನಗರ), * ಬಾಗೇಪಲ್ಲಿಯ ನಮ್ಮೂರ ಕಿರಿಯ ಪ್ರಾಥಮಿಕ ಶಾಲೆ(ಬೂಡಿದಿಗಡಪಲ್ಲಿ), ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಗುಟ್ಟಮೀದಪಲ್ಲಿ),
* ಗೌರಿಬಿದನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಹಂಪಸಂದ್ರ), ಸರ್ಕಾರಿ ಪ್ರೌಢಶಾಲೆ(ಬೈಚಾಪುರ), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ(ಕ್ರಿಶ್ಚಿಯನ್ ಕಾಲನಿ) ತಲಾ 4 ಸಾವಿರ ರೂಗಳೊಂದಿಗೆ ಹಳದಿ ಶಾಲೆ ಪ್ರಶಸ್ತಿ ತಮ್ಮದಾಗಿಸಿಕೊಂಡವು.