ಜಿಲ್ಲೆ

ಪರಿಸರ ನಾಶ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ

Dharwad

ವಿಜಯವಾಣಿ ಸುದ್ದಿಜಾಲ ಧಾರವಾಡ
ಅತಿಯಾದ ಕೈಗಾರೀಕರಣ, ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಕಾಡು ನಾಶವಾಗುತ್ತಿದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಪರಿಸರ ನಾಶವೇ ಜಾಗತಿಕ ತಾಪಮಾನ ಹೆಚ್ಚಾಗಲು ಕಾರಣ ಎಂದು ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ ಹೇಳಿದರು.
ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್‌ನ ಗೆಳೆಯರ ಬಳಗದ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಪಶ್ಚಿಮ ಘಟ್ಟಗಳಿಗೆ ಬಹಳ ಹತ್ತಿರವಾಗಿದ್ದು, ಇಲ್ಲಿನ ಮಣ್ಣು ಅತ್ಯಂತ ಫಲವತ್ತಾಗಿದೆ. ಕಾಡು ನಾಶದಿಂದ ಅರಣ್ಯದಲ್ಲಿ ವಾಸವಾಗಿದ್ದ ಚಿರತೆ, ಕಾಡಾನೆಗಳು ಆಹಾರ ಅರಸಿ ನಗರಗಳತ್ತ ಬರುತ್ತಿವೆ. ನಾವು ಪರಿಸರ ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದರು.
ಡಿ.ಆರ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ. ಎಸ್. ಸೂಡಂಬಿ ಅಧ್ಯಕ್ಷತೆ ವಹಿಸಿದರು. ಪಾಲಿಕೆ ವಲಯ ಅಽಕಾರಿ ಫಕೀರಪ್ಪ ಇಂಗಳಗಿ, ಮಧುಶ್ವಿನಿ ದೇಸಾಯಿ, ಇತರರಿದ್ದರು.
ವಿದ್ಯಾಸಾಗರ ದೀಕ್ಷಿತ ನಿರೂಪಿಸಿದರು. ಚರಿತಾ ಕಲ್ಲಿಹಾಳ ಪ್ರಾರ್ಥಿಸಿದರು. ಸುಭಾಷ್ ಸುಂಕದ ತಂಡ ನಾಡಗೀತೆ ಪ್ರಸ್ತುತಪಡಿಸಿತು.