ಔರಾದ್ ತಾಲೂಕಿನ ಸಂತಪುರ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮವನ್ನು ತಾಪಂ ಎಡಿ ಶಿವಕುಮಾರ ಘಾಟೆ ಉದ್ಘಾಟಿಸಿದರು. ಪ್ರಾಂಶುಪಾಲ ಭಗವಂತ ಕಾಂಬ್ಳೆ, ಬಸವರಾಜ, ಚಂದ್ರಕಾAತ ಪಾಟೀಲï, ಶಂಕರಸ್ವಾಮಿ, ದಯಾನಂದ, ರಾಜಕುಮಾರ, ಸ್ವರೂಪವತಿ, ಸಂಗೀತಾ, ಶಿವಕುಮಾರ ಇತರರಿದ್ದರು. 
ಜಿಲ್ಲೆ

ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ

ಔರಾದ್: ಪರಿಸರ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಒಂದು ಗಿಡ ಹೆಮ್ಮರವಾಗಿ ಬೆಳೆದಾಗ ಸುಮಾರು ಜನರಿಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ. ಆದ್ದರಿಂದ ಗಿಡಗಳನ್ನು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.

ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಗುರುವಾರ ಏರ್ಪಡಿಸಿದ್ದ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗಿಡ ಬೆಳೆಸುವುದರಿಂದ ಪರಿಸರ ಸ್ವಚ್ಛವಾಗಿರುವುದಲ್ಲದೆ ಮುಂದಿನ ಪೀಳಿಗೆ ಆರೋಗ್ಯಕರ ಜೀವನಕ್ಕೆ ಉಸಿರಾಡಲು ಶುದ್ಧ ಗಾಳಿ ಅಗತ್ಯವಿದೆ. ಇದನ್ನರಿತು ಗಿಡ ನೆಡಲು ಪ್ರತಿಜ್ಞೆ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲ ಭಗವಂತ ಕಾಂಬ್ಳೆ, ಬಸವರಾಜ, ಚಂದ್ರಕಾAತ ಪಾಟೀಲï, ಶಂಕರಸ್ವಾಮಿ, ದಯಾನಂದ, ರಾಜಕುಮಾರ, ಸ್ವರೂಪವತಿ, ಸಂಗೀತಾ, ಶಿವಕುಮಾರ ಇತರರಿದ್ದರು.