ಬಸವಕಲ್ಯಾಣ: ಪರಿಸರ ಉಳಿಸಲು ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ಯುವ ಜನಾಂಗ ಪ್ರಕೃತಿ ಉಳಿಸಲು ಮುಂದೆ ಬರಬೇಕಿದೆ ಎಂದು ಅರಣ್ಯ, ಪರಿಸರ ಜೀವಶಾಸ್ತç ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಶ್ವಶಾಂತಿ ಟ್ರಸ್ಟ್ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಶ್ರೀ ಗುರು ರಾಚೋಟಿ ಶಿವಾಚಾರ್ಯರ ಪುಣ್ಯಾರಾಧನೆ ನಿಮಿತ್ತ ತಡೋಳಾದ ಗುರುಕುಲಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಸಾವಯವ ಸಿರಿ ವಸ್ತು ಪ್ರದರ್ಶನ ಹಾಗೂ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಹಸಿರು ವಲಯ ಹೆಚ್ಚಿಸಲು ಪ್ರಸಕ್ತ ವರ್ಷ ಐದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ವನಮಹೋತ್ಸವದ ಅಡಿ ಜು.೧ರಿಂದ ಇದುರೆಗೆ ೩ ಕೋಟಿಗೂ ಅಧಿಕ ಸಸಿ ನೆಡಲಾಗಿದೆ. ಬೀದರ್ ಜಿಲ್ಲೆಯಲ್ಲೇ ಒಂದು ತಿಂಗಳಲ್ಲಿ ಸುಮಾರು ೧೨ ಲಕ್ಷ ಸಸಿ ನೆಡಲಾಗಿದೆ ಎಂದು ಹೇಳಿದರು.
ಆಧುನಿಕತೆ ಭರಾಟೆಯಲ್ಲಿ ಮರ ಗಿಡ ಬೆಳೆಸುವುದು ಪ್ರತಿಯೊಬ್ಬರೂ ಮರೆಯುತ್ತಿದ್ದಾರೆ. ಕಾಡು ಬೆಳೆದಾಗ ನಾಡು ಉಳಿಯುತ್ತದೆ. ಮನುಷ್ಯನ ಸ್ವಾರ್ಥ ಚಿಂತನೆಗಳಿAದ ಅರಣ್ಯ ಸಂಪತ್ತು ನಾಶವಾಗುತ್ತದೆ. ಕಾಂಕ್ರಿಟ್ ನಾಡಿಗಾಗಿ ನೈಸರ್ಗಿಕ ಸಂಪತ್ತು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದರು.
ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಸಂಸ್ಕಾರ, ಸಂಸ್ಕೃತಿಯಿAದ ಮನುಷ್ಯ ದೂರ ಹೋಗುತ್ತಿದ್ದು, ಆರೋಗ್ಯ ಪೂರ್ಣ ಸಮಾಜಕ್ಕಾಗಿ ಅಗತ್ಯ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ವಿಲಾಸಪಾಟೀಲ್ ಲಾತೂರ ಹಾಗೂ ಕೊಟಗ್ಯಾಳನ ಮುಚಳಂಬೆ ಪರಿವಾರದಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶಾಸಕರಾದ ಶರಣು ಸಲಗರ ಹಾಗೂ ಡಾ.ಸಿದ್ದಲಿಂಗಪ್ಪ ಪಾಟೀಲ್ ಆಶ್ರಮಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ಮಹಾರಾಷ್ಟçದ ಸಂಪನ್ಮೂಲ ವ್ಯಕ್ತಿ ಗೋವಿಂದರಾವ ಪವಾರ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜನಾಥ ಕಾಮಶೆಟ್ಟಿ, ಕೇಶಪ್ಪ ಬಿರಾದಾರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನೀಲಕಂಠ ರಾಠೋಡ್, ಪ್ರಮುಖರಾದ ಬಾಬುರಾವ ತುಂಬಾ, ಕೇಶವರಾವ ಪಾಟೀಲ್, ಸುರೇಶ ಪಾಟೀಲ್, ಕೃಷಿ ಸಹಾಯಕ ನಿರ್ದೇಶಕ ಮಾರ್ಥಂಡ ಮಚಕುರಿ ಇತರರಿದ್ದರು.