ಜಿಲ್ಲೆ

ಪರಿಸರ ಅಭಿವೃದ್ಧಿಗೆ ಹಣ ವಿನಿಯೋಗಿಸಿ

ಚನ್ನರಾಯಪಟ್ಟಣ: ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವ ಬದಲು ಪರಿಸರ ಅಭಿವೃದ್ಧಿಗೆ ಸದ್ಬಳಕೆ ಮಾಡುವುದು ಸೂಕ್ತ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆನಂದ್ ಅಣತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಶ್ರವಣಬೆಳಗೊಳ ಬೆಟ್ಟದಕೊಪ್ಪಲು ಗ್ರಾಮದಲ್ಲಿ ಪಕ್ಷದ ತಾಲೂಕು ಘಟಕದ ವತಿಯಿಂದ ಗುರುವಾರ 70 ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದ ಅವರು, ಪರಿಸರ ಅಭಿವೃದ್ಧಿಗೊಂಡಲ್ಲಿ ಮಾತ್ರ ಸಕಲ ಜೀವಸಂಕುಲ ಇಲ್ಲಿ ನೆಲೆ ನಿಲ್ಲಲು ಸಾಧ್ಯ ಎಂದರು.

ಶ್ರವಣಬೆಳಗೊಳ ಹೋಬಳಿ ಅಧ್ಯಕ್ಷ ರವಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮು, ತಾಲೂಕು ಮಾಜಿ ಅಧ್ಯಕ್ಷ ಶಿವನಂಜೇಗೌಡ, ರಾಜ್ಯ ಪರಿಷತ್ ಸದಸ್ಯ ಚಿಕ್ಕಬಿಳ್ತಿ ಪ್ರವೀಣ್, ನಗರ ಕಾರ್ಯದರ್ಶಿ ಧರಣೇಶ್, ಮುಖಂಡ ನಂಜುಂಡ ಮೈಮ್, ಯುವ ಬ್ರಿಗೇಡ್ ಉಪಾಧ್ಯಕ್ಷ ಜಗದೀಶ್ ಇದ್ದರು.