ಬೆಳಗಾವಿ: ಅತ್ಯಂತ ಪರಿಶ್ರಮ ಪಡುವ ಸಮಾಜ ಎಂದೇ ಗುರುತಿಸಿಕೊಂಡಿರುವ ಗಾಣಿಗ ಸಮಾಜದಲ್ಲಿ ಜನಿಸಿ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿರುವ ನರೇಂದ್ರ ಮೋದಿ ಅವರಂತೆ ಗಾಣಿಗ ಸಮುದಾಯದ ಯುವಜನರು ಸಾಧನೆ ಮಾಡಬೇಕು ಎಂದು ಡಾ.ವಿಜಯಲಕ್ಷಿ$್ಮ ಬಾಳೇಕುಂದ್ರಿ ಕಿವಿಮಾತು ಹೇಳಿದರು.
ನಗರದ ಎಸ್.ಜಿ.ಬಾಳೆಕುಂದ್ರಿ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗಾಣಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮನಸ್ಸಿನಲ್ಲಿ ಹೀಗೆ ಆಗಬೇಕು ಎಂದು ಸಂಕಲ್ಪಿಸಿದರೆ ಅದನ್ನು ಸಾಧಿಸಲು ಸಾಧ್ಯವಿದೆ. ಆದರೆ, ನನ್ನ ಭವಿಷ್ಯ, ಹಣೆಬರಹ ಹೀಗೆ ಬರೆದಿದೆ, ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ನಾವು ಅಂದುಕೊಂಡರೆ ಹಾಗೆಯೇ ಆಗುತ್ತೇವೆ. ಅದನ್ನು ಮೆಟ್ಟಿನಿಂತು ಮುನ್ನುಗ್ಗಿದರೆ ದೇಶದ ಭವಿಷ್ಯ ನಿರ್ಮಿಸಲು ಸಾಧ್ಯವಿದೆ ಎಂದರು.
ಮುಂದೆ ಗುರಿ, ಹಿಂದೆ ಗುರುವನಿಟ್ಟುಕೊಂಡರೆ ಪ್ರತಿಯೊಬ್ಬರೂ ಜೀವನದಲ್ಲಿ ಅಪಾರ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ. ನಮ್ಮ ಮನಸ್ಸಿನಲ್ಲಿ ಸದ್ಭಾವನೆ, ಸದ್ವಿಚಾರಗಳು ತುಂಬಿಕೊಂಡಿದ್ದರೆ ನಮ್ಮ ಹೃದಯವು ಚೆನ್ನಾಗಿ ಅದಕ್ಕೆ ಮಿಡಿಯುತ್ತದೆ ಎಂದರು.
ಸನಾತನ ಧರ್ಮದ ಋಗ್ವೇದದಲ್ಲೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಲಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲೆ ಪಾನ ನಿಷೇಧದ ಉಲ್ಲೆಖವಿದೆ. ವ್ಯಸನಮುಕ್ತ ಸಮಾಜದಿಂದ ದೇಶ ಹಾಗೂ ಸಮಾಜಕ್ಕೆ ಒಳಿತಾಗಲಿದೆ. ನಮ್ಮ ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ನಾವೆಲ್ಲರೂ ವ್ಯಸನ ಮುಕ್ತ ಸಮಾಜದ ಕನಸು ಕಂಡು ಉತ್ತಮ ವ್ಯಕ್ತಿಗಳಾಗಬೇಕು. ಎರಡನೇ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿರುವ ಎಸ್.ಜಿ.ಬಾಳೆಕುಂದ್ರಿ ಅವರು ಮಾಡಿರುವ ಸಾಧನೆ ಅನುಪಮ. ಅವರ ಸುಪುತ್ರಿ ಎನ್ನುವುದು ನನ್ನ ಪಾಲಿಗೆ ಅತ್ಯಂತ ಸಂತಸದ ಸಂಗತಿ. ಎಲ್ಲೆ ಹೋಗಲಿ, ಜನ ಅವರ ಹೆಸರನ್ನು ಹೇಳುತ್ತಾರೆ. ಅವರು ಮಾಡಿರುವ ಸಾಧನೆ ಜನಮನದಲ್ಲಿ ಹಸಿರಾಗಿ ಉಳಿದುಕೊಂಡಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆಗೈದ ಪ್ರತಿಭಾವಂತ ಗಾಣಿಗ ಸಮುದಾಯದ ವಿದ್ಯಾರ್ಥಿಗಳನ್ನು ಡಾ.ವಿಜಯಲಕ್ಷಿ$್ಮ ಬಾಳೆಕುಂದ್ರಿ ಸನ್ಮಾನಿಸಿದರು. ನಗರ ಗಾಣಿಗ ಸಮಾಜದ ಅಧ್ಯ ಪ್ರಕಾಶ ಬಾಳೇಕುಂದ್ರಿ, ಬೆಳಗಾವಿ ಗಾಣಿಗ ನೌಕರರ ವೇದಿಕೆ ಪದಾಧಿಕಾರಿಗಳಾದ ಉಲ್ಲಾಸ ಬಾಳೇಕುಂದ್ರಿ, ಶಿವರಾಯ ಏಳುಕೋಟಿ, ಬಾಲಚಂದ್ರ ಸವಣೂರ ಇದ್ದರು.