ಬೈಲಹೊಂಗಲ: ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಪರಿಶುದ್ಧ ಭಕ್ತಿಯಿಂದ ಪರಮಾತ್ಮನನ್ನು ಒಲಿಸಿಕೊಂಡಾಗ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ವಿಜಯಪುರದ ಷಣ್ಮೂಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ಸಮೀಪದ ಸುಕ್ಷೇತ್ರ ಇಂಚಲದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 82ನೇ ಜಯಂತ್ಯುತ್ಸವ, 52ನೇ ಅಖಿಲ ಭಾರತ ವೇದಾಂತ ಪರಿಷತ್, ರಜತ ರಥೋತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮದ ಶಿವಯೋಗೀಶ್ವರ ವೇದಾಂತ ವೇದಿಕೆಯಲ್ಲಿ ಶುಕ್ರವಾರ ಜರುಗಿದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಮನುಷ್ಯ ಜನ್ಮಕ್ಕೆ ಉತ್ತಮ ಸಂಸ್ಕಾರ ನೀಡಲು ಆಧ್ಯಾತ್ಮಿಕತೆಯ ಚಿಂತನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಮನುಷ್ಯ ಜೀವಿ ಸಾಧು-ಸಂತರ ಸಂಘಮಾಡಿ ಜೀವನದಲ್ಲಿ ಶ್ರೇಷ್ಠತೆ ಕಾಣಬೇಕು. ದುರ್ಗುಣ, ದುರಾಚಾರ ಬಿಟ್ಟು ಸುಂದರವಾದ ಜೀವನ ಸಾಗಿಸಬೇಕಾದರೆ ಸಾಧು ಸಂತರ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಮುಂಬೈ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಹುಬ್ಬಳ್ಳಿ ಜಡಿಸಿದ್ಧೇಶ್ವರ ಮಠದ ರಾಮಾನಂದ ಸ್ವಾಮೀಜಿ, ಹಳಕಟ್ಟಿ ನಿಜಗುಣ ಸ್ವಾಮೀಜಿ, ಕುಳ್ಳೂರ ಬಸವಾನಂದ ಸ್ವಾಮೀಜಿ, ಮಲ್ಲಾಪುರ ಚಿದಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ತೊಂಡಿಕಟ್ಟಿ ಆಭಿನವ ವೇಂಕಟೇಶ ಸ್ವಾಮೀಜಿ, ಹಡಗಿನಾಳ, ಮಲ್ಲೇಶ್ವರ ಶರಣರು, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ, ಎಸ್.ಎನ್. ಕೊಳ್ಳಿ, ರಾಜು ಜನ್ಮಟ್ಟಿ, ಕಾರ್ತಿಕ ಮಲ್ಲೂರ, ಗ್ರಾಪಂ ಅಧ್ಯಕ್ಷೆ ಶಿವನವ್ವ ಗೋವನಕೊಪ್ಪ, ಉಪಾಧ್ಯಕ್ಷೆ ನೀಲವ್ವ ಹಿರೇಮೇತ್ರಿ, ಶಿವಾನಂದ ಪೂಜಾರ, ಎಂ.ಎಸ್. ರಾಯನಾಯ್ಕರ, ಈರಪ್ಪ ಪಟ್ಟಣಶೆಟ್ಟಿ, ಎಸ್.ಜಿ. ಜಕಾತಿ, ಭರಮನಾಯ್ಕ ಮಲ್ಲೂರ, ಬಸಪ್ಪ ಮಲ್ಲೂರ, ಸದೆಪ್ಪ ವಾರಿ, ಸುರೇಶ ಕರಾಡೆ, ಶಿವಾನಂದ ದಿನ್ನಿಮನಿ ಇದ್ದರು.